ಚೀನಾದಲ್ಲಿ ಚಿತ್ತಾಕರ್ಷಕ ಹಿಮ ಶಿಲ್ಪ ಉತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

ice

ಚೀನಾದ ಈಶಾನ್ಯ ಪ್ರಾಂತ್ಯ ಹರ್ಬಿನ್‍ನಲ್ಲಿ ಆರಂಭವಾಗಿರುವ ವಾರ್ಷಿಕ ಹಿಮ ಶಿಲ್ಪ ಸ್ಪರ್ಧೆ ಮತ್ತು ಪ್ರದರ್ಶನದಲ್ಲಿ ವಿವಿಧ ರಾಷ್ಟ್ರಗಳ ಕಲಾವಿದರು ಮತ್ತು ಹಿಮ ಶಿಲ್ಪಗಳ 27 ತಂಡಗಳು ಭಾಗವಹಿಸಿವೆ. ದೇಶದ ಅತ್ಯಂತ ಥಂಡಿ ನಗರಗಳಲ್ಲಿ ಹರ್ಬಿನ್ ಸಹ ಒಂದು. 32ನೇ ವಾರ್ಷಿಕ ಅಂತಾರಾಷ್ಟ್ರೀಯ ಹಿಮ ಉತ್ಸವ ಪ್ರಯುಕ್ತ ಅತ್ಯಾಕರ್ಷಕ ಮತ್ತು ನಯನ ಮನೋಹರ ನಿರ್ಗಲ್ಲು ಶಿಲ್ಪಗಳು ರೂಪುಗೊಂಡವು.  ರಷ್ಯಾ, ಮಂಗೋಲಿಯಾ, ದಕ್ಷಿಣ ಕೊರಿಯಾ, ಮತ್ತು ಚೀನಾ ಸೇರಿದಂತೆ 10 ದೇಶಗಳಿಂದ ಕಲಾವಿದರು ಮತ್ತು ಹಿಮ ಶಿಲ್ಪಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಹಿಮ ಉತ್ಸವದಲ್ಲಿ ಹತ್ತಿರದ ನದಿಯೊಂದರÀ ಘನ ನಿರ್ಗಲ್ಲುಗಳನ್ನು ಈ ಕಲಾವಿದರು ತಮ್ಮ ಕಲ್ಪನೆಯಂತೆ ವಿವಿಧ ವಿನ್ಯಾಸಗಳಲ್ಲಿ ಪರಿವರ್ತನೆಗೊಳಿಸಿದ್ದಾರೆ. ಈ ಹಿಮ ಉತ್ಸವದಲ್ಲಿ ಹಲವಾರು ವರ್ಷಗಳಿಂದ ಸ್ರ್ಪಸುತ್ತಿರುವ ಅನುಭವಿ ಹಿಮ ಶಿಲ್ಪ ಕಲಾವಿದ ಸು ಶೀ ಅಂಬುಶ್ ಹೆಸರಿನ ಶಿಲ್ಪವೊಂದನ್ನು ಸೃಷ್ಟಿಸಿದ್ದಾನೆ. ಇದು ಚಿರತೆ ಮತ್ತು ಮೊಸಳೆಯ ಹಿಮ ಕಲಾಕೃತಿಗಳನ್ನು ಒಳಗೊಂಡಿದೆ.

ನನ್ನ ಕೌಶಲ್ಯಗಳು ಮತ್ತು ಸಾಮಥ್ರ್ಯಗಳನ್ನ ಸುಧಾರಿಸಿಕೊಳ್ಳಲು ನಾನು ಎಷ್ಟು ಸಾಧ್ಯವೋ ಅಷ್ಟು ಅನೇಕ ಸ್ಪರ್ಧೆಗಳಲ್ಲಿ ನಿರಂತರವಾಗಿ ನಾನು ಸ್ರ್ಪಸುತ್ತಿದ್ದೇನೆ. ಇದು ಒಂದು ರೀತಿಯಲ್ಲಿ ನನ್ನನ್ನು ಹಿಮ ಶಿಲ್ಪದತ್ತ ಮಾರು ಹೋಗುವಂತೆ ಮಾಡಿದೆ. ಇದು ಒಂದು ರೀತಿ ಮಹಿಳೆ ಮೇಕಪ್ ಮಾಡಿಕೊಳ್ಳುವಂತೆ. ಅವರು ಇದಕ್ಕಾಗಿ ಎಂದೂ ಆಯಾಸಗೊಳ್ಳುವುದಿಲ್ಲ ಹಾಗೂ ಎಷ್ಟು ಕಾಲ ತೆಗೆದುಕೊಂಡರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸು ಶೀ ವಿವರಿಸುತ್ತಾರೆ. ಬಹುಮಾನ ಗೆಲ್ಲುವುದು ತೀರಾ ಮುಖ್ಯ ಸಂಗತಿ ಅಲ್ಲ, ಇದರಲ್ಲಿ ನನಗೆ ತುಂಬಾ ದೊಡ್ಡ ನಿರೀಕ್ಷೆಗಳೇನೂ ಇಲ್ಲ. ನನ್ನ ಕಲಾತ್ಮಕ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಸುಧಾರಿಸುವ ಇಂಥ ಚಟುವಟಿಕೆಯಲ್ಲಿ ಭಾಗವಹಿಸುವುದಷ್ಟೇ ನನ್ನ ಉದ್ದೇಶ ಎಂದು ಹರ್ಬಿನ್‍ನ ಹಿಮ ಕಲಾವಿದ ಕಾವೋ ಗೌನ್‍ಜುನ್ ಹೇಳುತ್ತಾರೆ.

ವಿವಿಧ ದೇಶಗಳ ಕಲಾವಿದರು ಮತ್ತು ಹಿಮ ಶಿಲ್ಪಗಳ 27 ತಂಡಗಳು ಈ ಹಿಮ ಶಿಲ್ಪ ಸ್ಪರ್ಧೆಯಲ್ಲಿ ಭಾಗವಹಿಸಿ ಬೆರಗುಗೊಳಿಸುವ ಹಿಮ ಶಿಲ್ಪ ಕಲಾಕೃತಿಗಳನ್ನು ಸೃಷ್ಟಿಸಿ ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಜನವರಿ 5 ರಿಂದ ಆರಂಭವಾಗಿರುವ ಹಿಮ ಶಿಲ್ಪ ಸ್ಪರ್ಧೆ ಮತ್ತು ಪ್ರದರ್ಶನ ಫೆಬ್ರವರಿ ಅಂತ್ಯದವರೆಗೂ ಮುಂದುವರಿಯಲಿದೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin