ಚೀನಾದಲ್ಲಿ ನಡೆಯುವ ಜಿ-20 ಶೃಂಗಸಭೆಯಲ್ಲಿ ಮೋದಿ-ಒಬಾಮಾ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Modi-China

ವಾಷಿಂಗ್ಟನ್, ಆ.19- ಚೀನಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಸಮಾಲೋಚನೆ ನಡೆಸಲು ವೇದಿಕೆ ಸಜ್ಜಾಗಿದೆ.  ಅಮೆರಿಕ ಅಧ್ಯಕ್ಷರು ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಮುಂದಿನ ತಿಂಗಳು ಬೀಜಿಂಗ್ಗೆ ತೆರಳಲಿದ್ದು, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸುವ ಕಾರ್ಯಕ್ರಮವೂ ಇದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೋಶ್ ಅರ್ನೆಸ್ಟ್ ಹೇಳಿದ್ದಾರೆ.  ಏಷ್ಯಾ ಮತ್ತು ಪೆಸಿಫಿಕ್ ಪ್ರಾಂತ್ಯಗಳಲ್ಲಿ ಅಂತಾರಾಷ್ಟ್ರೀಯ ಆರ್ಥಿಕ ಸಹಕಾರದ ವೇದಿಕೆಯಾಗಿ ಜಿ-20 ಸದಸ್ಯ ರಾಷ್ಟ್ರಗಳಿಗೆ ಬೆಂಬಲ-ಸಹಕಾರ ನೀಡುವ ಅಮೆರಿಕ ಬದ್ಧತೆಯನ್ನು ಅಧ್ಯಕ್ಷರ ಚೀನಾ ಪ್ರವಾಸವು ದೃಢಪಡಿಸಲಿದೆ ಎಂದು ಅವರು ತಿಳಿಸಿದ್ದಾರೆ. ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರು ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಇದು ಒಬಾಮಾ ಮತ್ತು ಪ್ರಧಾನಿಯವರ ನಡುವಣ ಎಂಟನೆ ಭೇಟಿಯಾಗಲಿದೆ ಎಂದು ಅರ್ನೆಸ್ಟ್ ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin

Comments are closed.