ಚೀನಾದಲ್ಲಿ ಮತ್ತೊಂದು ಅಕ್ರಮ ಕಲ್ಲಿದ್ದಲು ಗಣಿ ಸ್ಫೋಟ : 21 ಕಾರ್ಮಿಕರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

China-01

ಬೀಜಿಂಗ್, ಡಿ.3-ಅಕ್ರಮ ಕಲ್ಲಿದ್ದಲು ಗಣಿಯೊಂದರಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದಾಗಿ 21 ಕಾರ್ಮಿಕರು ಮೃತಪಟ್ಟಿರುವ ಘಟನೆ ಚೀನಾದ ಈಶಾನ್ಯ ಭಾಗದ ಹೆಲಾಂಗ್‍ಜಿಯಾಂಗ್ ಪ್ರಾಂತ್ಯದಲ್ಲಿ ಸಂಭವಿಸಿದೆ. ಇದು ದೇಶದ ಗಣಿ ಉದ್ಯಮದಲ್ಲಿ ಇತ್ತೀಚೆಗೆ ಸಂಭವಿಸಿದ ಎರಡನೇ ದುರಂತವಾಗಿದೆ. ಕ್ವಿಟೈ ಪಟ್ಟಣದ ಖಾಸಗಿ ಕಲ್ಲಿದ್ದಲು ಗಣಿಯಲ್ಲಿ ಮಂಗಳವಾರ ಭಾರೀ ಸ್ಫೋಟ ಸಂಭವಿಸಿತ್ತು. ಇದೇ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ 22 ಮಂದಿ ಕಾರ್ಮಿಕರು ಗಣಿಯಲ್ಲಿ ಸಿಲುಕಿದ್ದರು. ಅವರನ್ನು ರಕ್ಷಿಸುವ ಕಟ್ಟ ಕಡೆ ಪ್ರಯತ್ನ ವಿಫಲಗೊಂಡಿದ್ದು, 21 ಜನ ಮೃತಪಟ್ಟಿದ್ದಾರೆ ಎಂದು ಪೊಲೀಸರು ಘೋಷಿಸಿದ್ದಾರೆ. ಒಬ್ಬ ಕಾರ್ಮಿಕ ಬದುಕುಳಿದಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಗಣಿ ಮಾಲೀಕ ಮತ್ತು ಮ್ಯಾನೇಜರ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಗೌಜೌವು ಪ್ರಾಂತ್ಯದಲ್ಲಿ ಅ.31ರಂದು ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ 33 ಮಂದಿ ಮೃತಪಟ್ಟಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin