ಚೀನಾದಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ ಸತ್ತವರ ಸಂಖ್ಯೆ 46ಕ್ಕೆರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

China-46-Dead

ಬೀಜಿಂಗ್, ಫೆ.4- ಚೀನಾದ ಸಾಂಪ್ರದಾಯಿಕ ಹೊಸ ವರ್ಷಾಚರಣೆ ವೇಳೆ ವಿವಿಧೆಡೆ ಸಂಭವಿಸಿದ ಪಟಾಕಿ ಸ್ಫೋಟ ಪ್ರಕರಣಗಳಲ್ಲಿ ಸತ್ತವರ ಸಂಖ್ಯೆ 46ಕ್ಕೇರಿದ್ದು, ಅನೇಕ ಮಂದಿ ತೀವ್ರ ಗಾಯಗೊಂಡಿದ್ದಾರೆ. 10,523 ಜನರನ್ನು ದುರ್ಘಟನೆ ನಡೆದ ಸ್ಥಳಗಳಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ.  ಚೀನಾದ ಲೂನಾರ್ ಹೊಸ ಸಂವತ್ಸರ ಆಚರಣೆ ಸಂದರ್ಭದಲ್ಲಿ ಪಟಾಕಿಗಳು, ಸಿಡಿಮದ್ದು ಮತ್ತು ಬಾಣ-ಬಿರುಸುಗಳನ್ನು ಸಿಡಿಸುವ ಸಾಂಪ್ರದಾಯವಿದೆ. ಕಳೆದ ಒಂದು ವಾರದಿಂದ 13,796 ಬಾರಿ ಪಟಾಕಿಗಳನ್ನು ಸುಡಲಾಗಿದ್ದು, ಅನೇಕ ದುರ್ಘಟನೆಗಳು ಸಂಭವಿಸಿದೆ.
ಈ ಪ್ರಕರಣಗಳಲ್ಲಿ ಈವರೆಗೆ 46 ಜನ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಶೋಚನೀಯವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ .

ಹೊಸ ವರ್ಷಾಚರಣೆಗಾಗಿ ಈ ಬಾರಿ 6.49 ದಶಲಕ್ಷ ಡಾಲರ್ ವೆಚ್ಚವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸಿಡಿಮದ್ದು ಪ್ರಮಾಣ ಮತ್ತು ದುರ್ಘಟನೆಗಳ ಪ್ರಮಾಣವು ಅನುಕ್ರಮವಾಗಿ ಶೇ.11.8 ಮತ್ತು ಶೇ.26.4ಕ್ಕೆ ಇಳಿದಿದೆ. ಕಳೆದ ವರ್ಷಕ್ಕಿಂತ ವೆಚ್ಚವು ಶೇ.54ರಷ್ಟು ಕಡಿಮೆಯಾಗಿದೆ ಎಂದು ಸಾರ್ವಜನಿಕ ಸುರಕ್ಷಾ ಸಚಿವಾಲಯ ಹೇಳಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin