ಚೀನಾದಲ್ಲಿ ಸುರಂಗದ ಗೋಡೆಗೆ ಬಸ್ ಅಪ್ಪಳಿಸಿ 38 ಮಂದಿ ಸಾವು
ಈ ಸುದ್ದಿಯನ್ನು ಶೇರ್ ಮಾಡಿ
ಬೀಜಿಂಗ್, ಆ.11-ಬಸ್ಸೊಂದು ಸುರಂಗದ ಗೋಡೆಗೆ ಅಪ್ಪಳಿಸಿ 38 ಮಂದಿ ಮೃತಪಟ್ಟು, ಇತರ 11 ಮಂದಿ ತೀವ್ರ ಗಾಯಗೊಂಡಿರುವ ಘಟನೆ ಚೀನಾದ ನೈರುತ್ಯ ಶಾಂಕ್ಸಿ ಪ್ರಾಂತ್ಯದ ಕ್ಸಿಯಾನ್-ಹಾನ್ಝೊಂಗ್ ಎಕ್ಸ್ಪ್ರೆಸ್ವೇನಲ್ಲಿ ಸಂಭವಿಸಿದೆ. ಪ್ರಯಾಣಿಕರಿದ್ದ ಮಿನಿ ಬಸ್ ನಿನ್ನೆ ರಾತ್ರಿ 11.34ರಲ್ಲಿ(ಸ್ಥಳೀಯ ಕಾಲಮಾನ) ಹೆದ್ದಾರಿಯಲ್ಲಿನ ಕ್ವಿನ್ಲಿಂಗ್ ಸುರಂಗದ ಗೋಡೆಗೆ ಅಪ್ಪಳಿಸಿತು. ಎಂದು ಶಾಂಕ್ಸಿ ಸಾರ್ವಜನಿಕ ಭದ್ರತಾ ಇಲಾಖೆಯ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಕ್ಸಿನ್ ಹುವಾ ವಾರ್ತಾ ಸಂಸ್ಥೆ ವರದಿ ಮಾಡಿದೆ.
ಸಿಚುಆನ್ ಪ್ರಾಂತ್ಯದ ರಾಜದಾನಿ ಚೆಂಗ್ಡು ನಗರದಿಂದ ಹೆನಾನ್ ಪ್ರಾಂತ್ಯದ ಲುಒಯಾಂಗ್ ಪಟ್ಟಣಕ್ಕೆ ಈ ಮಿನಿ ಬಸ್ ತೆರಳುತ್ತಿತ್ತು.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
Facebook Comments