ಚೀನಾದ ಐಷಾರಾಮಿ ಹೋಟೆಲ್‍’ಗೆ ಬೆಂಕಿ ಬಿದ್ದು ಐವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Hotel-Fire--01

ನನ್‍ಚಾಂಗ್, ಫೆ. 25-ಚೀನಾದ ನನ್‍ಚಾಂಗ್ ನಗರದ ಐಷಾರಾಮಿ ಹೋಟೆಲ್ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಐವರು ಮೃತಪಟ್ಟು, 12 ಮಂದಿ ತೀವ್ರ ಗಾಯಗೊಂಡಿದ್ದಾರೆ. ಚೀನಾದ ವಾಯುವ್ಯ ಪ್ರಾಂತ್ಯದ ನನ್‍ಚಾಂಗ್ ನಗರದ ಎಚ್‍ಎನ್‍ಎ ಪ್ಲಾಟಿನಂ ಮಿಕ್ಸ್ ಹೋಟೆಲ್‍ನಲ್ಲಿ ಈ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಬಹು ಅಂತಸ್ತುಗಳ ಕಟ್ಟಡದಿಂದ ದಟ್ಟ ಹೊಗೆ ಬರುತ್ತಿರುವ ದೃಶ್ಯಗಳನ್ನು ವಾರ್ತಾವಾಹಿನಿಗಳು ಬಿತ್ತರಿಸಿವೆ.   ಆರಂಭಿಕ ವರದಿಗಳ ಪ್ರಕಾರ ಈ ದುರ್ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ. ಹತ್ತು ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ದುರಂತದ ಸಂದರ್ಭದಲ್ಲಿ ಹೊಟೇಲ್ ಕಟ್ಟಡಗಳಲ್ಲಿ ಸಿಲುಕಿದ್ದ ಅನೇಕರನ್ನು ರಕ್ಷಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin