ಚೀನಾದ ಗಣಿಯೊಂದರಲ್ಲಿ ಅನಿಲ ಸೋರಿ 18 ಕಾರ್ಮಿಕರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

China-Mining--01

ಬೀಜಿಂಗ್, ಮೇ 8-ಚೀನಾದ ಹುನಾನ್ ಪ್ರಾಂತ್ಯದ ಕಲ್ಲಿದ್ದಲು ಗಣಿಯೊಂದರಲ್ಲಿ ಅನಿಲ ಸೋರಿ 18 ಕಾರ್ಮಿಕರು ಮೃತಪಟ್ಟಿರುವ ಘಟನೆ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.   ಹೌಂಗ್‍ಪೆಂಗ್‍ಕ್ವಿಯಾವೋ ಪಟ್ಟಣದ ಜಿಲಿನ್‍ಕಿಯಾವೋ ಕೊಲಿಯರಿ ಗಣಿಯಲ್ಲಿ 55 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಅನಿಲ ಸೋರಿ ಈ ದುರಂತ ಸಂಭವಿಸಿತು.
ರಕ್ಷಣಾ ಕಾರ್ಯಕರ್ತರು 37 ಕಾರ್ಮಿಕರನ್ನು ಸುರಕ್ಷಿತವಾಗಿ ಗಣಿಯಿಂದ ಹೊರಕ್ಕೆ ಕರೆತಂದಿದ್ದಾರೆ.ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಗಣಿ ಒಳಗೆ ಯಾವ ವಿಷಾನಿಲ ಸೋರಿಕೆಯಿಂದ ಈ ದುರ್ಘಟನೆ ಸಂಭವಿಸಿತು ಎಂಬ ಬಗ್ಗೆ ತನಿಖೆ ಮುಂದುವರಿದಿದ್ದು, ನಿರ್ಲಕ್ಷ್ಯತನದ ಆರೋಪದ ಮೇಲೆ ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ. ವಿಶ್ವದ ಬೃಹತ್ ಕಲ್ಲಿದ್ದಲು ಉತ್ಪಾದಕ ದೇಶವಾದ ಚೀನಾದ ಗಣಿಗಳು ಮೃತ್ಯ ಕೂಪಗಳಾಗಿದ್ದು, ಅಗಾಗ ಭೀಕರ ದುರಂತಗಳು ಸಂಭವಿಸುತ್ತಲೇ ಇರುತ್ತವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin