ಚೀನಾದ ಬಟ್ಟೆ ಗೋದಾಮಿನಲ್ಲಿ ಭಾರೀ ಸ್ಫೋಟ : 14 ಸಾವು, 147 ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Blast-China

ಬೀಜಿಂಗ್, ಅ.25- ಭಾರೀ ಸ್ಫೋಟದಿಂದ ಬಟ್ಟೆ ಗೋದಾಮು ಧಂಸಗೊಂಡಿದ್ದರಿಂದ ಕನಿಷ್ಠ 14 ಮಂದಿ ಮೃತಪಟ್ಟು, 147 ಜನ ಗಾಯಗೊಂಡಿರುವ ಘಟನೆ ಚೀನಾದ ಶಾಂಕ್ಸಿ ಪ್ರಾಂತ್ಯದ ಫುಗು ಕೌಂಟಿಯ ಕಿನ್‍ಮಿನ್ ಪಟ್ಟಣದಲ್ಲಿ ಸಂಭವಿಸಿದೆ.  ವಸತಿ ಪ್ರದೇಶವೊಂದರಲ್ಲಿ ನಿರ್ಮಿಸಲಾಗಿದ್ದ ವಸ್ತ್ರ ಸಂಗ್ರಹಾಗಾರದಲ್ಲಿ ನಿನ್ನೆ ಸಂಭವಿಸಿದ ಭಾರೀ ಸ್ಫೋಟದಿಂದಾಗಿ ಸ್ಥಳೀಯ ಆಸ್ಪತ್ರೆ ಸೇರಿದಂತೆ ಅಕ್ಕಪಕ್ಕದ 12 ಕಟ್ಟಡಗಳಿಗೂ ತೀವ್ರ ಹಾನಿಯಾಗಿದೆ.  ಪ್ರಿ-ಫ್ಯಾಬ್ರಿಕ್ ಗೋಡೌನ್ ಸಮೀಪದಲ್ಲೇ ಅಕ್ರಮವಾಗಿ ಸ್ಫೋಟಗಳನ್ನು ಸಂಗ್ರಹಿಸಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟ ಮತ್ತು ಭಾರೀ ಬೆಂಕಿಯನ್ನು ನಂದಿಸಲು ಅನೇಕ ಅಗ್ನಿಶಾಮಕ ವಾಹನಗಳೊಂದಿಗೆ ಬೆಂಕಿಯನ್ನು ನಂದಿಸಲು ಶ್ರಮಿಸಿದರು.  ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಂತದ ಬಗ್ಗೆ ತನಿಖೆ ನಡೆಯುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin