ಚೀನಾದ ಹೈಸ್ಪೀಡ್ ರೈಲು ಸುರಂಗದಲ್ಲಿ ಸ್ಫೋಟ, 12 ಕಾರ್ಮಿಕರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Train--0

ಬೀಜೀಂಗ್, ಮೇ 4- ನೈರುತ್ಯ ಚೀನಾದ ಹೈಸ್ಪೀಡ್ ರೈಲು ಸುರಂಗದಲ್ಲಿ ಸಂಭವಿಸಿದ ಸ್ಫೋಟದಲ್ಲಿ 12 ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಗುಯಿಝು ಪ್ರಾಂತ್ಯದ ರೈಲು ಸುರಂಗ ಮಾರ್ಗದಲ್ಲಿ ರಂಧ್ರ ಕೊರೆಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಸುರಂಗದಲ್ಲಿ ಅನಿಲ ತುಂಬಿ ಸ್ಫೋಟ ಸಂಭವಿಸಿತು ಎಂದು ಷಿಸುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆವಶೇಷಗಳಡಿ ಬದುಕುಳಿದವರಿಗಾಗಿ ರಕ್ಷಣಾ ಕಾರ್ಯಕರ್ತರು 12 ಗಂಟೆಗಳ ಕಾಲ ಶೋಧ ನಡೆಸಿದರು. ಸುಮಾರು 2,000 ರಕ್ಷಣಾ ಕಾರ್ಯಕರ್ತರು ಪರಿಹಾರ ಕಾರ್ಯಚರಣೆಯಲ್ಲಿ ಪಾಲ್ಗೊಂಡರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  Facebook Comments

Sri Raghav

Admin