ಚೀನಾವನ್ನು ಧ್ವಂಸಗೊಳಿಸಬಲ್ಲ ಅಗ್ನಿ-5 ಕ್ಷಿಪಣಿ ಯಶಸ್ವಿ ಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Agni-052

ಕಲಾಂ ದ್ವೀಪ( ಒಡಿಶಾ), ಡಿ.26- ಉತ್ತರ ಚೀನಾವನ್ನು ಧ್ವಂಸಗೊಳಿಸಬಲ್ಲ ಅಗಾಧ ಅಣು ಸಾಮಥ್ರ್ಯದ ಅಗ್ನಿ-5 ಖಂಡಾಂತರ ಸಿಡಿತಲೆ ಕ್ಷಿಪಣಿ (ಐಸಿಬಿಎಂ) ಉಡಾವಣೆ ಪರೀಕ್ಷೆಯನ್ನು ಭಾರತ ಇಂದು ಯಶಸ್ವಿಯಾಗಿ ನಡೆಸಿದೆ. ಈ ಮೂಲಕ ಭಾರತದ ರಕ್ಷಣಾ ಭತ್ತಳಿಕೆಗೆ ಮತ್ತೊಂದು ಬ್ರಹ್ಮಾಸ್ತ್ರ ಸೇರಿದಂತಾಗಿದೆ. ಎರಡು ವರ್ಷಗಳಿಂದ ಇದಕ್ಕಾಗಿ ನಡೆದ ನಿರಂತರ ಸಂಶೋಧನೆ ಮತ್ತು ಪ್ರಯೋಗಗಳು ಪೂರ್ಣಗೊಂಡಿದ್ದವು. ಒಡಿಶಾದ ಕಲಾಂದ್ವೀಪದಲ್ಲಿ ಇಂದು ಕ್ಷಿಪಣಿ-5 ಪರೀಕ್ಷಾರ್ಥವಾಗಿ ಉಡಾವಣೆ ಮಾಡಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಜನವರಿ 2015ರಲ್ಲಿ ಈ ಕ್ಷಿಪಣಿಗೆ ಸಂಬಂಧಿಸಿದಂತೆ ನಡೆದ ಪರೀಕ್ಷೆಯಲ್ಲಿ ಕೆಲವು ತಾಂತ್ರಿಕ ದೋಷಗಳು ಕಂಡುಬಂದಿದ್ದವು. ಈಗ ಎಲ್ಲ ಲೋಪದೋಷಗಳನ್ನು ನಿವಾರಿಸಿದ ನಂತರ ಪ್ರಯೋಗಾರ್ಥ ಉಡ್ಡಯನ ಸಫಲವಾಗಿದೆ.   ಅಗ್ನಿ-5 ಕ್ಷಿಪಣಿಯ ಮೂರು ಹಂತಗಳಲ್ಲಿ ಇದು 4ನೇ ಮತ್ತು ಕಟ್ಟ ಕಡೆಯ ಪರೀಕ್ಷೆಯಾಗಿತ್ತು. ಸ್ಟ್ರಾಟಿಜಿಕ್ ಫೋರ್ಸ್ ಕಮಾಂಡ್ (ಎಸ್‍ಎಫ್‍ಸಿ) ಇದನ್ನು ಪ್ರಾಯೋಗಿಕ ಬಳಕೆಗಳಿಗೆ ಉಪಯೋಗಿಸಲು ಅರಂಭಿಸುವುದಕ್ಕೂ ಮುನ್ನ ಪೂರ್ಣ ಪ್ರಮಾಣದ ಪರೀಕ್ಷಾರ್ಥ ಉಡಾವಣೆಯನ್ನು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಣ್ವಸ್ತ್ರ ಸಾಮಥ್ರ್ಯದ ಕ್ಷಿಪಣಿಗಳನ್ನು ಹೊಂದಿರುವ ಹಾಗೂ ಪರಮಾಣು ಪೂರೈಕೆ ರಾಷ್ಟ್ರಗಳ (ಎನ್‍ಎಸ್‍ಜಿ) ಸಮೂಹಕ್ಕೆ ಸೇರಲು ಭಾರತಕ್ಕೆ ಅಡ್ಡಗಾಲು ಹಾಕುತ್ತಿರುವ ಚೀನಾಗೆ ಈ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯಿಂದ ದಿಟ್ಟ ಪ್ರತ್ಯುತ್ತರ ನೀಡಿದಂತಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin