ಚೀನಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರಿಸ್ ಕಿರೀಟ ಮುಡಿಗೇರಿಸಿಕೊಂಡ ಪಿ.ವಿ.ಸಿಂಧು

ಈ ಸುದ್ದಿಯನ್ನು ಶೇರ್ ಮಾಡಿ

PVS

ನವದೆಹಲಿ, ನ.20– ಚೈನಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರಿಸ್ ಗೆಲ್ಲುವ ಮೂಲಕ ಭಾರತದ ಪಿ.ವಿ.ಸಿಂಧು ಮತ್ತೊಂದು ಐತಿಹಾಸಿಕ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.  ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದ ಸಿಂಧು ಇಂದು ನಡೆದ ಫೈನಲ್ಸ್‍ನಲ್ಲಿ ಚೀನಾದ ಸನ್ಯೂ ಅವರ ವಿರುದ್ಧ 21-11, 17-21 ಮತ್ತು 21-11ರ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇದು ಸಿಂಧು ಅವರ ಪ್ರಥಮ ಚೈನಾ ಓಪನ್ ಬ್ಯಾಡ್ಮಿಂಟನ್‍ನ ಗೆಲುವಾಗಿದೆ. ಮೊದಲ ಸೆಟ್‍ಅನ್ನು ಲೀಲಾಜಾಲವಾಗಿ ಗೆದ್ದ ನಂತರ ದ್ವಿತೀಯ ಸೆಟ್‍ಅನ್ನು ಕಳೆದುಕೊಂಡಿದ್ದರು. ಆದರೆ, ಅಂತಿಮ ಹಾಗೂ ನಿರ್ಣಾಯಕ ಸೆಟ್‍ನಲ್ಲಿ ಮತ್ತೆ ಲಯ ಕಂಡುಕೊಂಡ ಭಾರತೀಯ ಆಟಗಾರ್ತಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರು.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin