ಚೀನಾ ಗಡಿಯಲ್ಲಿ ಭಾರತೀಯ ವಾಯುಸೇನೆಯ ಸುಖೋಯ್-30 ಯುದ್ಧ ವಿಮಾನ ನಾಪತ್ತೆ
ನವದೆಹಲಿ. ಮೇ.23 : ಭಾರತೀಯ ವಾಯುಸೇನೆಗೆ ಸೇರಿದ ಸುಖೋಯ್-30 ಯುದ್ಧ ವಿಮಾನ ಉತ್ತರ ಅಸ್ಸಾಂನ ತೇಜ್ಪುರ ಬಳಿ ಸಂಪರ್ಕ ಕಡಿದುಕೊಂಡು ಚೀನಾ ಗಡಿ ಬಳಿ ನಾಪತ್ತೆಯಾಗಿದೆ. ಅಸ್ಸಾಂನ ತೇಜ್ ಪುರದಿಂದ ಹಾರಾಟ ಪ್ರಾರಂಭಿಸಿದ್ದ ಸುಖೋಯ್-30 ಯುದ್ಧ ವಿಮಾನ ತೇಜ್ ಪುರದಿಂದ 60 ಕಿ.ಮೀ ದೂರ ತೆರಳುತ್ತಿದ್ದಂತೆ ರೆಡಾರ್ ಸಂಪರ್ಕ ಕಡಿತಗೊಂಡಿದೆ.
ಯುದ್ಧ ವಿಮಾನದಲ್ಲಿ ಇಬ್ಬರು ಪೈಲಟ್ ಗಳಿದ್ದರು ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಸುಖೋಯ್ ಯುದ್ಧ ವಿಮಾನ ನಾಪತ್ತೆ ಹಿನ್ನೆಲೆ ವಿಮಾನ ಪತ್ತೆಗೆ ತೀವ್ರ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾ ನಿರ್ಮಿತ ಯುದ್ಧವಿಮಾನದಲ್ಲಿ ಕೆಲವು ವರ್ಷಗಳಿಂದ ತಾಂತ್ರಿಕ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. 2009ರಿಂದ ಇದುವರೆಗೆ ಒಟ್ಟು 7 ‘ಸುಖೋಯ್–30’ ವಿಮಾನಗಳು ಪತನವಾಗಿವೆ. ಮಾರ್ಚ್ 15ರಂದು ಒಂದು ವಿಮಾನ ರಾಜಸ್ತಾನದಲ್ಲಿ ಪತನವಾಗಿತ್ತು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS