ಚೀನಾ ಪ್ರಸ್ತಾವನೆ ತಿರಸ್ಕರಿಸಿದ ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

China-america--01

ವಾಷಿಂಗ್ಟನ್,ಮಾ.9– ಕೊರಿಯಾ ದ್ವೀಪಕಲ್ಪದಲ್ಲಿ ಭುಗಿಲೆದ್ದಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಲು ಮುಂದಾಗುವಂತೆ ಚೀನಾ ಸಲ್ಲಿಸಿದ್ದ ಪ್ರಸ್ತಾವನೆಯೊಂದನ್ನು ಅಮೆರಿಕ ತಳ್ಳಿ ಹಾಕಿದೆ.  ಉತ್ತರ ಕೊರಿಯಾ ಮುಂದುವರಸಿರುವ ಮಾರಕ ಅಣವಸ್ತ್ರ ಚಟುವಟಿಕೆಗಳನ್ನು ನಿಲ್ಲಿಸುವಂತೆ ಆ ದೇಶದ ಮನವೊಲಿಸಲು ಈ ಹಿಂದೆ ತಾನು ನಡೆಸಿದ ಎಲ್ಲ ಯತ್ನಗಳು ವಿಫಲವಾಗಿವೆ. ಆದ್ದರಿಂದ ಚೀನಾದ ಹೊಸ ಪ್ರಸ್ತಾವನೆಯನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಪ್ರಸ್ತುತ ಉದ್ಭವಿಸಿರುವ ಮಾರಕ ಅಣ್ವಸ್ತ್ರಗಳ ಕುರಿತ ಉದ್ವಿಗ್ನ ಸ್ಥಿತಿ ನಿವಾರಿಸುವ ಸಲುವಾಗಿ ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ಅಮೆರಿಕ ಸಲಹೆ ನೀಡಿದೆ.
ಈ ವೇಳೆ ಅಮೆರಿಕ ಹಾಗೂ ದಕ್ಷಿಣ ಕೊರಿಯಾ ನಡುವಿನ ರಕ್ಷಣೆ ಮತ್ತು ಸಹಕಾರದ ವಿರುದ್ದ ಉತ್ತರ ಕೊರಿಯಾ ಕೈಗೊಂಡ ಮಾರಕ ಅಣ್ವಸ್ತ್ರ ಕಾರ್ಯಕ್ರಮಗಳ ಬಗ್ಗೆ ಸದ್ಯ ಭುಗಿಲೆದ್ದಿರುವ ಗದ್ದಲ-ತಾತ್ಸರಗಳೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಅಮೆರಿಕ ವಿದೇಶಾಂಗ ಇಲಾಖೆ ಉಸ್ತುವಾರಿ ವಕ್ತಾರ ಮಾರ್ಕ್ ಟಾನರ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin