ಚೀನಾ ಮತ್ತು ತೈವಾನ್ ಮೇಲೆ ಅಪ್ಪಳಿಸಿದ ಚಂಡಮಾರುತ ರೌದ್ರಾವತಾರಕ್ಕೆ 6 ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

China

ಬೀಜಿಂಗ್, ಸೆ.29-ಚೀನಾ ಮತ್ತು ತೈವಾನ್ ಮೇಲೆ ಅಪ್ಪಳಿಸಿದ ವಿನಾಶಕಾರಿ ಮೆಗಿ ಚಂಡಮಾರುತಕ್ಕೆ ಕನಿಷ್ಠ ಆರು ಮಂದಿ ಬಲಿಯಾಗಿದುದ, ಅನೇಕರು ನಾಪತ್ತೆಯಾಗಿದ್ದಾರೆ. ಈ ಪ್ರಕೃತಿ ವಿಕೋಪದಲ್ಲಿ 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಚೀನಾದ ಪೂರ್ವ ಝೆಜಿಯಾಂಗ್ ಪ್ರಾಂತ್ಯದ ಮೇಲೆ ಗಂಟೆಗೆ 120 ಕಿ.ಮೀ.ವೇಗದಲ್ಲಿ ಚಂಡಮಾರುತ ಅಪ್ಪಳಿಸಿದ್ದು, ಸುಯಿಚಾಂಗ್ ಕೌಂಟಿಯ ಸುಕುನ್ ಗ್ರಾಮದಲ್ಲಿ ಭಾರೀ ಮಳೆ ಮತ್ತು ಭೂಕುಸಿತದಿಂದ ಇಬ್ಬರು ಮೃತಪಟ್ಟು, 26ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಪ್ರಕೃತಿ ವಿಕೋಪದಲ್ಲಿ ಹಲವಾರು ಮನೆಗಳು ನಾಶವಾಗಿವೆ ಇಲ್ಲವೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ.

xhinA 04

ರಕ್ಷಣಾ ಕಾರ್ಯಕರ್ತರು ಈವರೆಗೆ 15 ಮಂದಿಯನ್ನು ರಕ್ಷಿಸಿದ್ದಾರೆ. ಭಗ್ನಾವಶೇಷಗಳ ಕೆಳಗೆ ಸಿಲುಕಿದ್ದ ಓರ್ವ ಗರ್ಭಿಣಿಯನ್ನು ರಕ್ಷಿಸಲಾಗಿದ್ದು, ಆಕೆಯ ಕಾಲು ಮುರಿದಿವೆ.

Waters churned in the Jhihtan Dam in Xindian district, New Taipei City, as Typhoon Megi hit eastern Taiwan.
Waters churned in the Jhihtan Dam in Xindian district, New Taipei City, as Typhoon Megi hit eastern Taiwan.

ತೈಪೆ ವರದಿ : ಇದೇ ಮೆಗಿ ಚಂಡಮಾರುತದ ರೌದ್ರಾವತಾರಕ್ಕೆ ತೈವಾನ್‍ನಲ್ಲಿ ನಾಲ್ವರು ಮೃತಪಟ್ಟು, 280ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.  ಫುಜಿಯಾನ್‍ನ ನಗರ ಮತ್ತು ನಾಲ್ಕು ಕೌಂಟಿಗಳಲ್ಲಿ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಇದು ಈ ವರ್ಷ ಅಪ್ಪಳಿಸಿದ 17ನೇ ಚಂಡಮಾರುತವಾಗಿದೆ.

China 02

china 1

► Follow us on –  Facebook / Twitter  / Google+

Facebook Comments

Sri Raghav

Admin