ಚೀನಾ ಮೇಲೆ ಕಣ್ಣಿಡಲು ಪೂರ್ವ ಗಡಿಯಲ್ಲಿ ರಫೆಲ್ ಜೆಟ್‍ಗಳ ಮೊದಲ ನೆಲೆಗೆ ಭಾರತ ಸಿದ್ದತೆ

ಈ ಸುದ್ದಿಯನ್ನು ಶೇರ್ ಮಾಡಿ

China-Rafel-Jet

ನವದೆಹಲಿ, ಜ.7-ಪಾಕಿಸ್ತಾನದ ಕುಮ್ಮಕ್ಕಿನೊಂದಿಗೆ ಅಗಾಗ ಕ್ಯಾತೆ ತೆಗೆಯುತ್ತಿರುವ ಚೀನಾದ ಪ್ರತಿರೋಧ ಎದುರಿಸಲು ಹಾಗೂ ತನ್ನ ಅಣ್ವಸ್ತ್ರ ಸಾಮಥ್ರ್ಯವನ್ನು ಮತ್ತಷ್ಟು ಬಲಗೊಳಿಸಲು ಭಾರತ ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಣ್ವಸ್ತ್ರಗಳನ್ನು ಹೊಂದಿರುವ ರಫೆಲ್ ಫೈಟರ್ ಜೆಟ್‍ಗಳ ಮೊದಲ ವಾಯು ನೆಲೆಯನ್ನು ದೇಶದ ಪೂರ್ವ ವಲಯದಲ್ಲಿ ಹೊಂದಲು ಭಾರತ ಸಿದ್ಧತೆ ನಡೆಸುತ್ತಿದೆ.   ಈಶಾನ್ಯ ರಾಜ್ಯ ಅಸ್ಸಾಂನ ತೇಜ್‍ಪುರ್ ಮತ್ತು ಚಾಬುವಾದಲ್ಲಿ ಸುಖೋಯ್-30ಎಂಕೆಐ ಯುದ್ಧ ವಿಮಾನಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಾ ಆ ಪ್ರಾಂತ್ಯದ ರಕ್ಷಣೆಯಲ್ಲಿ ತೊಡಗಿವೆ. ಈಗ ಪೂರ್ವ ವಲಯವನ್ನು ಇನ್ನಷ್ಟು ಸದೃಢಗೊಳಿಸಲು ಪಶ್ಚಿಮಬಂಗಾಳದ ಹಸಿಮರ ವಾಯು ನೆಲೆಯಲ್ಲಿ ಮೊದಲ ತಂಡವಾಗಿ 18 ರಫೆಲ್ ಫೈಟರ್ ಜೆಟ್‍ಗಳನ್ನು ನಿಯೋಜಿಸಲು ಉದ್ದೇಶಿಸಲಾಗಿದ್ದು, 2019ರಿಂದ ಇದು ಕಾರ್ಯಾರಂಭ ಮಾಡಲಿದೆ.

ಚೀನಾದ ಉತ್ತರ ಭಾಗವನ್ನು ಧ್ವಂಸಗೊಳಿಸಬಲ್ಲ ಅಗಾಧ ಅಣ್ವಸ್ತ್ರ ಸಾಮಥ್ರ್ಯದ ಅಗ್ನಿ-4 ಮತ್ತು ಅಗ್ನಿ-5 ಖಂಡಾಂತರ ಕ್ಷಿಪಣಿಗಳ ಪ್ರಾಯೋಗಿಕ ಪರೀಕ್ಷೆ ನಡೆಸುವಲ್ಲಿ ಭಾರತ ಯಶಸ್ವಿಯಾಗಿದೆ. ಈ ಬೆಳವಣಿಗೆ ಚೀನಾದ ಕಣ್ಣುರಿಗೆ ಕಾರಣವಾಗಿದೆ. ಅಲ್ಲದೇ ಈಶಾನ್ಯ ಭಾರತದ ಮತ್ತೊಂದು ರಾಜ್ಯ ಅರುಣಾಚಲಪ್ರದೇಶದಲ್ಲೂ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿಯನ್ನು ಪಹರೆಗೆ ನಿಯೋಜಿಸಿದ ಬಳಿಕ ಚೀನಾ ಭಾರತದ ಮೇಲೆ ವಕ್ರದೃಷ್ಟಿ ಬೀರಿದ್ದು, ಪಾಕ್‍ನೊಂದಿಗೆ ಕುತಂತ್ರಗಳನ್ನು ಮಾಡುತ್ತಿದೆ.

ಈ ಎಲ್ಲ ಕಾರಣಗಳಿಂದ ದೇಶದ ಪೂರ್ವ ಗಡಿ ಭಾಗವನ್ನು ಬಲಗೊಳಿಸಲು ರಫೆಲ್ ಜೆಟ್‍ಗಳ ಬಿಗಿ ಪಹರೆಗೆ ಭಾರತದ ಸಜ್ಜಾಗಿದೆ. ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ರಫೆಲ್ ಫೈಟರ್ ಜೆಟ್‍ಗಳನ್ನು ಹೊಂದಲು ಭಾರತ ಫ್ರಾನ್ಸ್ ಜೊತೆ 59,000 ಕೋಟಿ ರೂ.ಗಳ ಒಡಂಬಡಿಕೆಗೆ ಸಹಿ ಹಾಕಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin