ಚೀಲೂರು ಗ್ರಾಮದ ಹಾಲು ಉತ್ಪಾನ ಡೈರಿಗೆ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

kanakapura

ಕನಕಪುರ, ಆ.30- ತಾಲ್ಲೂಕಿನ ಚೀಲೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಗ್ರಾಮದ ಡೈರಿ ಆವರಣದಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ಹೈನುಗಾರಿಕೆಯಿಂದ ರೈತಾಪಿ ವರ್ಗ ಸ್ವಾವಲಂಬಿ ಜೀವನ ನಡೆಸುವುದರ ಜತೆಗೆ ಸಂಘದ ಸದಸ್ಯರು ಉತ್ತಮ ಹಾಲನ್ನು ನೀಡುವ ಮೂಲಕ ಸಂಘವನ್ನು ಪ್ರೊತ್ಸಾಹಿಸುತ್ತಿದ್ದಾರೆ ಎಂದು ಸ್ಮರಿಸಿದರು.

ಬೆಂಗಳೂರು ಡೈರಿ ತಾಲ್ಲೂಕು ಉಪವ್ಯವಸ್ಥಾಪಕ ಡಾ.ಗೋಪಾಲಗೌಡ ಮಾತನಾಡಿ, ಚೀಲೂರು ಗ್ರಾಮದ ಹಾಲು ಉತ್ಪಾದಕರ ಸಂಘ ಕಾರ್ಯನಿರ್ವಹಣೆಯಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ತಾಲ್ಲೂಕಿನಲ್ಲಿಯೇ ಉತ್ತಮ ಪ್ರಥಮ ಸಂಘದ ಆಯ್ಕೆಗೆ ಕಾರಣವಾಗಿದೆ. ಈ ಪ್ರಶಸ್ತಿಯನ್ನು ಶೀರ್ಘವೇ ನೀಡಲಾಗುವುದು ಎಂದರು.ಇತ್ತೀಚಿನ ದಿನಗಳಲ್ಲಿ ಕ್ಷೀರಕ್ಷೇತ್ರದಲ್ಲಿ ಸಾಕಷ್ಟು ಪೈಪೋಟಿಯನ್ನು ನೀಡಬೇಕಾಗಿರುವುದರಿಂದ ಗುಣಮಟ್ಟದ ಸುಧಾರಣೆ ಹಾಗೂ ಸವಾಲುಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ರೈತರು ಗುಣಮಟ್ಟದ ಹಾಲುನ್ನು ಪೂರೈಕೆ ಮಾಡಿ ತಾವೂ ಸಹ ಹೆಚ್ಚಿನ ಆದಾಯವನ್ನು ಹೊಂದುವಂತೆ ಸಲಹೆ ನೀಡಿದರು.

ತಾಲ್ಲೂಕು ನಿರ್ದೇಶಕ ರಾಮಕುಮಾರ್ ಮಾತನಾಡಿ ಸಂಘದ ಸದಸ್ಯರ ಅನುಕೂಲಕ್ಕಾಗಿ ಡೈರಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.  ಸಿಇಒ ಡಿ.ಶಿವಲಿಂಗಯ್ಯ ಪ್ರಸಕ್ತ ಸಾಲಿನ ಸಂಘದ ವರದಿಯನ್ನು ಮಂಡಿಸಿ 7.88 ಲಕ್ಷ ನಿವ್ವಳ ಲಾಭ ಗಳಿಸಿದೆ. 20 ಲಕ್ಷ ರೂ. ಆದಾಯದಲ್ಲಿ ಸಂಘ ಮುಂದುವರೆಯುತ್ತಿದೆ ಎಂದು ವಾರ್ಷಿಕ ವರದಿಯನ್ನು ಓದಿದರು. ಈ ಸಂದರ್ಭದಲ್ಲಿ ಅತಿಹೆಚ್ಚು ಹಾಲು ಸರಬರಾಜು ಮಾಡಿದ ಮೂವರು ಸದಸ್ಯರಿಗೆ ಪ್ರೊತ್ಸಾಹ ನೀಡಿ ಉಳಿದ 20 ಮಂದಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin