ಚುಂಗನಹಳ್ಳಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು

ಈ ಸುದ್ದಿಯನ್ನು ಶೇರ್ ಮಾಡಿ

WATER

ಚಿಕ್ಕನಾಯಕನಹಳ್ಳಿ, ಆ.31- ಚುಂಗನಹಳ್ಳಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲು ಶೀಘ್ರದಲ್ಲೇ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್‍ಬಾಬು ತಿಳಿಸಿದರು.ತಾಲೂಕಿನ ಚುಂಗನಹಳ್ಳಿ ಗ್ರಾಮಕ್ಕೆ ಶಾಸಕರು, ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲಿಸಿ ಕೂಡಲೇ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿದರು.ನಂತರ ಮಾತನಾಡಿದ ಶಾಸಕರು, ಚುಂಗನಹಳ್ಳಿಯಲ್ಲಿ ನೀರಿನ ಕಲ್ಮಶದಿಂದ ಗ್ರಾಮಸ್ಥರು ಅನಾರೋಗ್ಯಕ್ಕೆ ಒಳಗಾಗಿದ್ದು, ಅವರ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಗ್ರಾಮಕ್ಕೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಶೀಘ್ರದಲ್ಲೇ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಗ್ರಾಮದಲ್ಲಿ 2 ಬೋರ್‍ವೆಲ್‍ಗಳಿದ್ದು, ನೀರನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗುವುದು. ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.ಜಿಪಂ ಸದಸ್ಯ ಸೋಮನಹಳ್ಳಿ ಕಲ್ಲೇಶ್ ಮಾತನಾಡಿ, ಗ್ರಾಮದ ನೀರು ಪ್ಲೊರೈಡ್‍ಯುಕ್ತ ನೀರು ಎಂದು ಕಂಡುಬಂದಲ್ಲಿ ಗ್ರಾಮಕ್ಕೆ ತಕ್ಷಣವೇ ಬೇರೆ ಕಡೆ ಕೊಳವೆಬಾವಿ ಕೊರೆಸಲಾಗುವುದು ಎಂದು ಹೇಳಿದರು.ತಾಪಂ ಉಪಾಧ್ಯಕ್ಷ ಆಲದಕಟ್ಟೆ ತಿಮ್ಮಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರುದ್ರಸ್ವಾಮಿ, ತಾಪಂ ಸಿಇಒ ಕೃಷ್ಣಮೂರ್ತಿ, ಕಿರಣ್, ಪಿಡಿಒ ಮುಂತಾದ ಅಧಿಕಾರಿಗಳು ಶಾಸಕರ ಜತೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin