ಚುಂಚನಕಟ್ಟೆಯಲ್ಲಿ ಜಲಪಾತೋತ್ಸವದಲ್ಲಿ ಚಿತ್ತಾರ

ಈ ಸುದ್ದಿಯನ್ನು ಶೇರ್ ಮಾಡಿ

yesh--actor-Inauguration

ಕೆ.ಆರ್.ನಗರ, ಆ.29– ತಾಲೂಕಿನ ಚುಂಚನಕಟ್ಟೆಯಲ್ಲಿ ಜಲಪಾತೋತ್ಸವಕ್ಕೆ ರಂಗು ರಂಗಿನ ಬೆಳಕಿನ ಚಿತ್ತಾರದಲ್ಲಿ ಕತ್ತಲೆಯನ್ನು ಸರಿದು ವಿದ್ಯುತ್ ಬೆಳಕಿನ ಚಿತ್ತಾರ ಮೋಡಿ ಮಾಡಿತು.ನೀರಿನ ಜುಳುಜುಳು ನಿನಾದದೊಡನೆ ಸ್ಪರ್ಧಿಸುತ್ತಿರುವಂತೆ ಬೆಳಕಿನ ಕಿರಣಗಳು ನೋಡುಗರು ಹುಚ್ಚೆದ್ದು ಕುಣಿವಂತೆ ಮಾಡಿದವು. ತಂಪಾದ ಹವೆಯು ಮೈಮನವನ್ನು ಸಮತೋಲನದಲ್ಲಿ ಹಿಡಿದಿಡುವಂತೆ ಮಾಡಿ, ಇಡೀ ಜಲಪಾತೋತ್ಸವದ ಉಲ್ಲಾಸ ಆ ವಾತಾವರಣದ ಸೊಬಗನ್ನು ನೂರ್ಮಡಿಗೊಳಿಸಿತು. ಇದು ತಾಲೂಕಿನ ಚುಂಚನಕಟ್ಟೆಯಲ್ಲಿ ದನುಷ್ಕೋಟಿ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಚಲನಚಿತ್ರ ನಟ ಯಶ್ ಮತ್ತು ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಸಾ.ರಾ.ಮಹೇಶ್ ಜ್ಯೊತಿ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು.
ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ, ಈ ಮೊದಲು ಜಲಪಾತೋತ್ಸವ ಕಾರ್ಯಕ್ರಮವು ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿತ್ತು ಅದೇ ರೀತಿ ಚುಂಚನಕಟ್ಟೆಯಲ್ಲಿ ನಡೆಯುತ್ತಿರುವ ಜಲಪಾತೋತ್ಸವ ಕಾರ್ಯಕ್ರಮವು ವಿಶ್ವಾದ್ಯಂತ ಪ್ರಚಾರಗೊಂಡು ಹೆಸರುವಾಸಿಗೊಳ್ಳಲಿ ಎಂದು ಹೇಳಿದರು.

ಶಾಸಕ ಸಾ.ರಾ.ಮಹೇಶ್ ಮಾತನಾಡಿ, ತ್ರೇತಾಯುಗದಲ್ಲಿ ಚುಂಚನಕಟ್ಟೆಯನ್ನು ಚುಂಚಾರಣ್ಯ ಕ್ಷೇತ್ರ ಶ್ರೀರಾಮ ವನವಾಸದಲ್ಲಿದ್ದಾಗ ಪಶ್ಚಿಮಾಭಿಮುಖವಾಗಿ ಚುಂಚರಾಣ್ಯ ಕ್ಷೇತ್ರದಲ್ಲಿ ಮಡದಿ ಸೀತಾಮಾತೆ ಹಾಗೂ ಸಹೋದರ ಲಕ್ಷ್ಮಣನೊಂದಿಗೆ ಆಗಮಿಸುತ್ತಾನೆ ಸೀತಾಮಾತೆಗೆ ಸ್ನಾನ ಮಾಡುವ ಬಯಕೆಯಾದಾಗ ಲಕ್ಷ್ಮಣ ತನ್ನ ಧನುಸ್ಸಿನಿಂದ ಬಂಡೆಯೊಂದನ್ನು ಸೀಳಿದಾಗ ಧುಮಿಕ್ಕಿದ ನೀರಿನಲ್ಲಿ ಸೀತಾಮಾತೆ ಸ್ನಾನ ಮಾಡುತ್ತಾಳೆ ಆಗಿನಿಂದ ಈ ಸ್ಥಳಕ್ಕೆ ಧನುಷ್ಕಕೋಟಿ ಎಂಬ ಹೆಸರು ಬಂದಿತು ಎಂದು ವಿವರಿಸಿದರು.

ಈ ಸ್ಥಳವು ಮುಂದಿನ ದಿನಗಳಲ್ಲಿ ವಿಶ್ವಪ್ರಸಿದ್ಧಿಯಾಗುವುದರೊಂದಿಗೆ ಜಗತ್ತಿನ ಭೂಪಟದಲ್ಲಿ ಚುಂಚನಕಟ್ಟೆ ಪ್ರವಾಸೋದ್ಯಮ ಕ್ಷೇತ್ರವಾಗಿ ಮಾರ್ಪಾಡಾಗುತ್ತದೆ. ನಮ್ಮ ಅವಧಿಯಲ್ಲಿ ಪ್ರಾರಂಭಗೊಂಡ ಈ ಜಲಪಾತೋತ್ಸವವು ನಿರಂತರವಾಗಿ ಪ್ರತಿ ವರ್ಷ ನಡೆಯುತ್ತದೆ ಎಂದು ಶಾಸಕ ಸಾ.ರಾ.ಮಹೇಶ ತಿಳಿಸಿದರು. ಚಲನಚಿತ್ರ ನಟ ಯಶ್ ಮಾತನಾಡಿ, ಜಲಪಾತೋತ್ಸವದಂತಹ ಕಾರ್ಯಕ್ರಮ ಮಾಡುವುದರಿಂದ ಚುಂಚನಕಟ್ಟೆಯು ಮುಂದೆ ವಿಶ್ವದಾದ್ಯಂತ ಗುರುತಿಸಲ್ಪಡುವುದರ ಜತೆಗೆ ಇಂದಿನ ಯುವ ಪೀಳಿಗೆಗೆ ಸ್ಥಳದ ಇತಿಹಾಸ ತಿಳಿಯುತ್ತದೆ, ಜತೆಗೆ ನಮ್ಮಲ್ಲಿ ಇರುವ ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಮಾರ್ಪಡಿಸುವ ಮೂಲಕ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಶ್ರಮಿಸಬೇಕು ಎಂದು ವೇದಿಕೆಯ ಮೂಲಕ ವಿನಂತಿಸಿಕೊಂಡರು.

ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್, ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ನಿರ್ದೇಶಕ ದಯಾನಂದ್, ಉಪವಿಭಾಗ ಅಧಿಕಾರಿ ಡಾ.ಸೌಜನ್ಯ, ಡಿವೈಎಸ್‍ಪಿ ಕಲಾಕೃಷ್ಣಮೂರ್ತಿ, ಚೆಸ್ಕಾಂ ಅಭಿಯಂತರಾದ ನಾಗೇಶ್, ತಹಸಿಲ್ದಾರ್ ಜಿ.ಹೆಚ್.ನಾಗರಾಜ್, ಉಪತಹಸೀಲ್ದಾರ್ ತಿಮ್ಮಯ್ಯ, ಎಂ.ಎಸ್.ಯುದುಗಿರೀಶ್, ಚೆಸ್ಕಾಂ ಇಂಜಿನಿಯರ್ ಪ್ರಸನ್ನ, ನಾಗರಾಜು, ಮುಜರಾಯಿ ಇಲಾಖೆ ಚಂದ್ರಮೋಹನ್, ಜಿ.ಪಂ. ಸದಸ್ಯರಾದ ಡಿ.ರವಿಶಂಕರ್, ವೀಣಾಕೀರ್ತಿ, ತಾ.ಪಂ.ಅಧ್ಯಕ್ಷ ಹೆ.ಟಿ.ಮಂಜುನಾಥ್, ಸದಸ್ಯರಾದ ಮಮತಾಮಹೇಶ್, ಸಾಕಮ್ಮ, ಚಂದ್ರಶೇಖರ್, ಕುಪ್ಪೆ ಗ್ರಾ.ಪಂ. ಅಧ್ಯಕ್ಷೆ ಯಶೋದಮಹೇಶ್, ಉಪಾದ್ಯಕ್ಷ ನವೀನ್‍ಕುಮಾರ್ ಮತ್ತಿತರರು ಹಾಜರಿದ್ದರು.ಚಲನಚಿತ್ರನಟ ಯಶ್‍ಗೆ ಮೈಸೂರು ಪೇಟ ತೊಡಿಸಿ ಬೆಳ್ಳಿ ಖಡ್ಗನೀಡಿ ಗಣ್ಯರು ಸನ್ಮಾನಿಸಿದರು. ಶಾಸಕ ಸಾ.ರಾ.ಮಹೇಶ್ ಪತ್ನಿ ಅನಿತಾಮಹೇಶ್ ಕೃಷ್ಣ ನೀ ಬೇಗನೆ ಬಾರೋ ಭಕ್ತಿಗೀತೆ ಹಾಡುಹೇಳಿ ಕಾರ್ಯಕ್ರಮದಲ್ಲಿ ಸೇರಿದ್ದ ಸಾವಿರಾರು ಜನತೆಯನ್ನು ರಂಜಿಸುವ ಮೂಲಕ ಸುಗಮ ಸಂಗೀತದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

 

► Follow us on –  Facebook / Twitter  / Google+

Facebook Comments

Sri Raghav

Admin