ಚುನಾವಣಾ ಆಯೋಗದಿಂದ ಈವರೆಗೆ 39 ಕೋಟಿ ವಶ

ಈ ಸುದ್ದಿಯನ್ನು ಶೇರ್ ಮಾಡಿ

Black-Money--01ಬೆಂಗಳೂರು, ಏ.25- ಚುನಾವಣೆ ಫ್ಲೈಯಿಂಗ್ ಸ್ಕ್ವಾಡ್‍ಗಳ ತಂಡ, ಎಸ್‍ಎಸ್‍ಟಿ ಮತ್ತು ಇತರೆ ಪೊಲೀಸ್ ಪ್ರಾಧಿಕಾರಗಳು ವಿವಿಧೆಡೆ ದಾಳಿ ನಡೆಸಿ ಸುಮಾರು 39,99,84,517 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ.1156 ಫ್ಲೈಯಿಂಗ್ ಸ್ಕ್ವಾಡ್ ಮತ್ತು 1125 ಸ್ಪಾಟಿಕ್ ಸರ್ವಲೆನ್ಸ್ ಟೀಮ್‍ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಮಾದರಿ ನೀತಿ ಸಂಹಿತೆ ಜಾರಿಗಾಗಿ ರಚಿಸಿದ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಇತರೆ ಮಾದರಿ ನೀತಿ ಸಂಹಿತೆ ತಂಡಗಳು 12,537 ಗೋಡೆ ಬರಹಗಳು, 17,693 ಪೋಸ್ಟರ್ ಮತ್ತು 7711 ಬ್ಯಾನರ್‍ಗಳನ್ನು ಸಾರ್ವಜನಿಕ ಸ್ಥಳದಿಂದ ತೆರವುಗೊಳಿಸಲಾಗಿದೆ. ಖಾಸಗಿ ಜಾಗಗಳಲ್ಲಿ ಒಟ್ಟಾರೆ 6886 ಗೋಡೆ ಬರಹ, 7949 ಪೋಸ್ಟರ್ ಮತ್ತು 2543 ಬ್ಯಾನರ್‍ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತೆಗೆದುಹಾಕಲಾಗಿದೆ.

ಇದಲ್ಲದೆ, ಕಳೆದ 24 ಗಂಟೆಗಳಲ್ಲಿ 8,45,000ರೂ. ನಗದು, 3 ಲಕ್ಷ ಮೌಲ್ಯದ 1 ವಾಹನ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಸ್ಪಾಟಿಕ್ ಸರ್ವಲೈಸ್ ತಂಡಗಳು 35,74,85,360ರೂ. ನಗದು, 1,76,80,000 ಮೌಲ್ಯದ 7 ಕೆಜಿ 704 ಗ್ರಾಂ ಚಿನ್ನ, 11,47,200ರೂ. ಮೌಲ್ಯದ ಬೆಳ್ಳಿ, 2,00,38,503ರೂ. ಮೌಲ್ಯದ 2409 ಲೀಟರ್ ಮದ್ಯ ಮತ್ತಿತರ ವಾಹನಗಳನ್ನು ವಶಪಡಿಸಿಕೊಂಡಿದೆ. ಕಳೆದ 24 ಗಂಟೆಗಳಲ್ಲಿ ಪೊಲೀಸ್ ಪ್ರಾಧಿಕಾರಗಳು ಒಟ್ಟಾರೆ 7,70,000ರೂ. ನಗದು, 90 ಸಾವಿರ ಮೌಲ್ಯದ 2500 ಪಾರ್ಟಿ ಫ್ಲಾಗ್‍ಗಳು, 1 ಸಾವಿರ ಶಾಲು, 2 ಸಾವಿರ ಪಾರ್ಟಿಕ್ಯಾಬ್, 1 ಸಾವಿರ ಪಾರ್ಟಿ ಬ್ಯಾಡ್ಜ್, 70,150ರೂ. ಮೌಲ್ಯದ 22 ಬಂಡಲ್ ಪಕ್ಷದ ಟೀ ಶರ್ಟ್, 15 ಬಂಡಲ್ ಶಾಲು, 5 ಬಂಡಲ್ ಬ್ಯಾನರ್, 4 ಬಂಡಲ್ ಶಾಲು, 10 ಸೀರೆ, 160 ಲ್ಯಾಪ್‍ಟಾಪ್ ಮುಂತಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಕಳೆದ 24 ಗಂಟೆಗಳಲ್ಲಿ 36 ಪ್ರಕರಣಗಳನ್ನು ದಾಖಲಿಸಲು ಫ್ಲೈಯಿಂಗ್ ಸ್ಕ್ವಾಡ್‍ಗಳು 496 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ.  ಎಸ್‍ಎಸ್‍ಟಿ, ನಗದು ಮತ್ತಿತರ ವಸ್ತುಗಳಿಗೆ ಸಂಬಂಧಿಸಿದಂತೆ ಆರು ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಾಗಿದೆ. ಒಟ್ಟು 97 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಅಬಕಾರಿ ಇಲಾಖೆ 43,187,35 ಲೀಟರ್‍ಗಳಷ್ಟು ಐಎಂಎಲ್ ಮದ್ಯ ವಶಪಡಿಸಿಕೊಂಡು 81 ಪ್ರಕರಣ ದಾಖಲಿಸಿದೆ.

ಮದ್ಯದ ಪರವಾನಗಿ ಉಲ್ಲಂಘಿಸಿರುವ 34 ಪ್ರಕರಣ ದಾಖಲಿಸಲಾಗಿದೆ. ಒಟ್ಟಾರೆ 19,54,91,587 ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. 548 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ 24 ಗಂಟೆಗಳಲ್ಲಿ ಸಿಆರ್‍ಪಿಸಿ ಕಾಯ್ದೆಯಡಿ 435 ವ್ಯಕ್ತಿಗಳಿಂದ ಮುಚ್ಚಳಿಕೆ ಪಡೆಯಲಾಗಿದೆ. 5 ಶಸ್ತ್ರಾಸ್ತ್ರ ದಾಸ್ತಾನು ಮಾಡಿಕೊಳ್ಳಲಾಗಿದೆ. 815 ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ. 153 ಪ್ರಕರಣಗಳನ್ನು ಸಿಆರ್‍ಪಿಸಿ ಕಾಯ್ದೆಯಡಿ ದಾಖಲು ಮಾಡಲಾಗಿದೆ. 896 ನಾಕಾಗಳನ್ನು ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ. ಈವರೆಗೆ ಒಟ್ಟು 97,024 ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. 52 ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, 6 ಶಸ್ತ್ರಾಸ್ತ್ರದ ಪರವಾನಗಿಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin