ಚುನಾವಣಾ ಚಾಣಕ್ಯನ ವಾಸ್ತವ್ಯಕ್ಕೆ ಬೆಂಗಳೂರಲ್ಲಿ ಮನೆ ಬಾಡಿಗೆ ಪಡೆದ ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--Think

ಬೆಂಗಳೂರು,ಮಾ.3- ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಗರದಲ್ಲಿ ಎರಡು ತಿಂಗಳು ವಾಸ್ತವ್ಯ ಹೂಡಲು ಚಾಲುಕ್ಯ ವೃತ್ತದ ಸಮೀಪದಲ್ಲಿ ಆರು ಕೊಠಡಿಗಳುಳ್ಳ ದೊಡ್ಡ ಮನೆಯನ್ನು ಬಾಡಿಗೆಗೆ ಪಡೆಯಲಾಗಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಕನಸಿನೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲೇ ಮೊಕ್ಕಾಂ ಹೂಡಲು ನಿರ್ಧರಿಸಿದ್ದು, ಇದಕ್ಕಾಗಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ.

ಡಾಲರ್ಸ್ ಕಾಲೋನಿ, ಕುಮಾರ ಪಾರ್ಕ್ ಮತ್ತು ಚಾಲುಕ್ಯ ಸರ್ಕಲ್‍ನಲ್ಲಿ ತಲಾ ಒಂದೊಂದು ಮನೆಯನ್ನು ನೋಡಿದ್ದೇವು, ಚಾಲುಕ್ಯ ಸರ್ಕಲ್ ಬಳಿಯಿರುವ ಮನೆ ಬಾಡಿಗೆ ಪಡೆಯಲು ನಾವು ನಿರ್ಧರಿಸಿದ್ದೆವು, ಅದರಂತೆ ವಿಶೇಷ ಭದ್ರತಾ ಪಡೆ ಇದೇ ಮನೆಯನ್ನು ಬಾಡಿಗೆ ಪಡೆದುಕೊಳ್ಳಲು ಅನುಮತಿ ನೀಡಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ಈ ಮೊದಲು ಅಮಿತ್ ಶಾ ಬೆಂಗಳೂರಿಗೆ ಬಂದಾಗ ಕುಮಾರ ಕೃಪಾ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆದರೆ ಚುನಾವಣೆ ದಿನಾಂಕ ಘೋಷಣೆಯಾದರೇ ಈ ಸರ್ಕಾರಿ ಅತಿಥಿಗೃಹ ಲಭ್ಯವಾಗುವುದಿಲ್ಲ,. ಹೀಗಾಗಿ ಬೇರೆ ವ್ಯವಸ್ಥೆ ಮಾಡಿದ್ದೇವೆ, ಬಿಜೆಪಿ ರಾಜ್ಯ ಘಟಕ ಮನೆ ಬಾಡಿಗೆ ಹಣ ಪಾವತಿಸಲಿದೆ ಎಂದು ಹೇಳಿದ ಅವರು, ಬಾಡಿಗೆ ಹಣ ಎಷ್ಟು ಎಂಬುದನ್ನು ಬಹಿರಂಗ ಪಡಿಸಲಿಲ್ಲ.

ಮಾರ್ಚ್ ಅಂತ್ಯದ ವೇಳೆ ಅಮಿತ್ ಶಾ ವಾಸ್ತವ್ಯವನ್ನು ಬೆಂಗಳೂರಿಗೆ ವರ್ಗಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಬಿಜೆಪಿಯ ಎಲ್ಲಾ ಚಟುವಟಿಕೆಗಳನ್ನು ಈಗಾಗಲೇ ತಮ್ಮ ಕೈಗೆ ತೆಗೆದುಕೊಂಡಿರುವ ಅಮಿತ್ ಶಾ ಮುಂದಿನ ದಿನಗಳಲ್ಲಿ ಈ ಮನೆಯಲ್ಲೇ ಕುಳಿತು ಪ್ರಮುಖ ಸಭೆಗಳನ್ನು ನಡೆಸಿ ತಂತ್ರಗಾರಿಕೆಗಳನ್ನು ಸಿದ್ಧಪಡಿಸಲಿದ್ದಾರೆ. ಸಕಲ ಸೌಲಭ್ಯವಿರುವ ಮೂರು ಅಂತಸ್ತಿನ ಮನೆ ಇದಾಗಿದ್ದು, ಆರು ಬೆಡ್ರೂಂಗಳಿವೆ. ಜತೆಗೆ 40-50 ಜನ ಕುಳಿತು ಸಭೆ ನಡೆಸಲು ಅನುಕೂಲವಾಗುವಂತಹ ಸ್ಥಳಾವಕಾಶವಿದೆ.

Facebook Comments

Sri Raghav

Admin