ಚುನಾವಣೆಗಳಲ್ಲಿ ಹಿಂದುತ್ವ ಬಳಕೆ ನಿಷೇಧಿಸುವಂತೆ ಸುಪ್ರೀಂ ಕೋರ್ಟ್’ಗೆ ಟೀಸ್ಟಾ ಸೆಟಲ್ವಾಡ್ ಮೊರೆ

ಈ ಸುದ್ದಿಯನ್ನು ಶೇರ್ ಮಾಡಿ

Teesta-01

ನವದೆಹಲಿ, ಅ.21- ಅಭ್ಯರ್ಥಿಗಳು ಮತ್ತು ಧಾರ್ಮಿಕ ನಾಯಕರುಗಳ ಮೈತ್ರಿ ಕುರಿತು ಈಗ ನಡೆಯುತ್ತಿರುವ ಚರ್ಚೆಗೆ ಕಡಿವಾಣ ಹಾಕುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿರುವ ಸಾಮಾಜಿಕ ಕಾರ್ಯಕರ್ತೆ ಟೀಸ್ಟಾ ಸೆಟಲ್ವಾಡ್, ಚುನಾವಣೆಗಳಲ್ಲಿ ಹಿಂದುತ್ವ ವಿಷಯ ಬಳಕೆಯನ್ನು ನಿಷೇಧಿಸುವಂತೆಯೂ ಕೋರಿದ್ದಾರೆ. ಈ ಅರ್ಜಿಯು ಬಿಜೆಪಿ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.  ಟೀಸ್ಟಾ ಅವರೊಂದಿಗೆ ನಿವೃತ್ತ ಪ್ರೊಫೆಸರ್ ಷಂಶುಲ್ ಇಸ್ಲಾಮ್ ಮತ್ತು ಪತ್ರಕರ್ತ ದಿಲೀಪ್ ಸಿ ಮಂಡಲ್ ಅವರು ಸಹ ಈ ಚುನಾವಣೆಯಲ್ಲಿ ಹಿಂದುತ್ವ ಬಳಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಹಿಂದುತ್ವವೇ ಜೀವನದ ಒಂದು ಮಾರ್ಗ ಹಾಗೂ ಅದನ್ನು ಯಾವುದೇ ಇತರ ಧರ್ಮದೊಂದಿಗೆ ಸಮೀಕರಣ ಮಾಡುವಂತಿಲ್ಲ ಎಂದು 1995ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಮರು ಪರಿಶೀಲನೆ ಮಾಡುವಂತೆ ಕೋರಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ಏಳು ನ್ಯಾಯಾಧೀಶರ ಸಂವಿಧಾನಪೀಠಕ್ಕೆ ಜಂಟಿ ಮನವಿ ಸಲ್ಲಿಸಲಾಗಿದೆ.  ತಾನು ಧರ್ಮದ ಆಧಾರದ ಮೇಲೆ ಮತ ಯಾಚಿಸುತ್ತಿಲ್ಲ. ಬದಲಿಗೆ ಸಾಂಸ್ಕøತಿಕ ಅಸ್ವಿತ್ವ ಮತ್ತು ರಾಷ್ಟ್ರೀಯತೆಯನ್ನು ಪ್ರಧಾನವಾಗಿ ಪರಿಗಣಿಸುತ್ತಿದೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ತನ್ನ ಹಕ್ಕುಪ್ರತಿಪಾದನೆಗೆ ಬೆಂಬಲ ಗಿಟ್ಟಿಸಲು ಸುಪ್ರೀಂಕೋರ್ಟ್‍ನ ತೀರ್ಪನ್ನು ಎತ್ತಿಹಿಡಿಯುವ ಕೇಸರಿ ಪಕ್ಷಕ್ಕೆ ಈ ಅರ್ಜಿಯಿಂದ ನೇರ ಪರಿಣಾಮವಾಗುವ ಸಾಧ್ಯತೆ ಇದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin