ಚುನಾವಣೆಗೆ ಕೇಜ್ರಿವಾಲ್ ಹತ್ರ ಹಣ ಇಲ್ವಂತೆ..!?

ಈ ಸುದ್ದಿಯನ್ನು ಶೇರ್ ಮಾಡಿ

Aravind-kejriwal

ಪಣಜಿ, ಆ.22– ಪಂಜಾಬ್ ಮತ್ತು ಗೋವಾ ವಿಧಾನಸಭೆ ಚುನಾವಣೆಗಳಲ್ಲಿ ಸೆಣಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ (ಎಎಪಿ) ಬಳಿ ಹಣ ಇಲ್ವಂತೆ…!? ಈ ವಿಷಯವನ್ನು ಸ್ವತಃ ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಅವರೇ ಹೇಳಿದ್ದಾರೆ. ದಕ್ಷಿಣ ಗೋವಾದಲ್ಲಿ ನಿನ್ನೆ ರಾತ್ರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರ ನಿಯೋಗವನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರಿಂದ ಈ ಮಾತುಗಳು ಬಂದವು.  ದೆಹಲಿ ಸರ್ಕಾರವನ್ನು ನಡೆಸುತ್ತಿದ್ದರೂ ಎಎಪಿ ಬಳಿ ಚುನಾವಣೆಯಲ್ಲಿ ಸೆಣಸಲು ಹಣವಿಲ್ಲ. ಒಂದೂವರೆ ವರ್ಷದಿಂದ ದೆಹಲಿಯಲ್ಲಿ ನಾವು ಅಧಿಕಾರ ನಡೆಸುತ್ತಿದ್ದೇವೆ. ಆದರೂ ನಮ್ಮ ಬಳಿ ದುಡ್ಡಿಲ್ಲ.

ಬೇಕಾದರೆ ನನ್ನ ಬ್ಯಾಂಕ್ ಖಾತೆಯನ್ನು ನಾನು ತೋರಿಸುತ್ತೇನೆ. ಪಕ್ಷದ ಹಣಕಾಸು ಸ್ಥಿತಿ ಕೂಡ ಇದೇ ಆಗಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಪಂಜಾಬ್ ಮತ್ತು ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಎಎಪಿ ಕಣಕ್ಕಿಳಿದಿದೆ.

► Follow us on –  Facebook / Twitter  / Google+

Facebook Comments

Sri Raghav

Admin