ಚುನಾವಣೆಗೆ ಮೊದಲೇ ಶುರುವಾಯ್ತು ರಾಜಕೀಯ ಪಕ್ಷಗಳ ಕೆಸರೆರಚಾಟ, ಕಾಲೆಳೆಯುವಾಟ

ಈ ಸುದ್ದಿಯನ್ನು ಶೇರ್ ಮಾಡಿ

political-leaders

ರಾಜ್ಯದ ವಿಧಾನಸಭಾ ಚುನಾವಣೆಗೆ ಇನ್ನೂ 10 ತಿಂಗಳು ಬಾಕಿ ಇದೆ. ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಶತಾಯ ಗತಾಯ ಹೋರಾಟಕ್ಕೆ ಈಗನಿಂದಲೇ ಸಜ್ಜಾಗಿವೆ.  ರಾಜಕೀಯ ಲಾಭಕ್ಕಾಗಿ ನಾಯಕರ ನಡುವೆ ಟೀಕೆ, ಪರಸ್ಪರ ಕಾಲೆಳೆಯುವಿಕೆ, ಕೆಸರೆರಚಾಟ ಇವುಗಳನ್ನು ನೋಡಿದರೆ ರೇಜಿಗೆ ಉಂಟಾಗುತ್ತದೆ.  ಇತ್ತೀಚಿನ ದಿನಗಳಲ್ಲಿ ರಾಜಕೀಯವು ದ್ವೇಷ, ಹಗೆತನ ಮತ್ತು ಜಾತಿ ರಾಜಕೀಯದ ವಿದ್ಯಮಾನಗಳು ಬೇಸರ ಮೂಡಿಸುವಷ್ಟು ಹೆಚ್ಚಾಗುತ್ತಿವೆ.  ರಾಜಕೀಯ ಲಾಭಕ್ಕಾಗಿ ನಾಯಕರ ನಡುವೆ ಮಾತಿನ ಭರಾಟೆ ಎಲ್ಲೆ ಮೀರಿದೆ. ಮಂತ್ರಿ ಮಹೋದಯರೂ ಸಹ ಬಿಡದೆ ರಾಜಕೀಯ ದುರ್ಲಾಭಕ್ಕಾಗಿ ಆಕ್ಷೇಪಾರ್ಹ ಪದಗಳಿಂದ ಟೀಕಿಸುತ್ತಿರುವುದು ವಿಪರ್ಯಾಸ. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನವಾಕ್ಸಮರ ಹಾದಿಬೀದಿ ರಂಪಾಟದಂತಾಗಿದೆ. ಈ ಎಲ್ಲಾ ವಿದ್ಯಮಾನಗಳು ರಾಜಕೀಯ ಲಾಭಕ್ಕಾಗಿಯೋ ಅಥವಾ ಸೇಡಿನ ರಾಜಕೀಯ ಕ್ಕಾಗಿಯೋ ಅಥವಾ ರಾಜಕೀಯವ್ಯವಸ್ಥೆಯೇ ಈ ರೀತಿ ಆಗಿದೆಯೋ ಎಂಬ ಪ್ರಶ್ನೆಗಳು ಕಾಡುತ್ತವೆ.
ರಾಜಕೀಯ ಕ್ಷೇತ್ರದಲ್ಲಿ ಟೀಕೆಗಳು ಸರ್ವೇ ಸಾಮಾನ್ಯ, ಆದರೆ ಟೀಕೆ ಮಾಡುವ ಪದಗಳು ಎಲ್ಲೆ ಮೀರಬಾರದು. ಒಂದು ವೇಳೆ ಆ ಸರಹದ್ದು ದಾಟಿದರೆ ರಾಜಕಾರಣಕ್ಕೆ ಅರ್ಥವೇ ಇರುವುದಿಲ್ಲ. ಚುನಾವಣಾ ಪ್ರಚಾರ ವೇಳೆ ಅಭ್ಯರ್ಥಿಗಳ ವಿರುದ್ಧ ಹೀನ ಪದ ನಿಂದಿಸಿದರೆ ಮತದಾರರ ಮೇಲೆ ಪರಿಣಾಮ ಬೀರಿ ಚುನಾವಣೆ ಫಲಿತಾಂಶವೇ ಎಡವಟ್ಟಾಗುತ್ತದೆ.   ನಂಜನಗೂಡು-ಗುಂಡುಪೇಟೆ ಉಪಚುನಾವಣೆಯಲ್ಲಿ ನಡೆದರಾಜಕೀಯ ನಾಯಕರವಾಗ್ದಾಳಿಗಳೇ ತಾಜಾ ಉದಾಹರಣೆ. ಉಪಚುನಾವಣೆಯಲ್ಲಿರಾಜಕೀಯ ಸಿದ್ದಾಂತಗಳನ್ನು ಗಾಳಿಗೆ ತೂರಲಾಗಿದೆಯಲ್ಲದೆ ಮತದಾರ ಕಣ್ತಪ್ಪಿಸುವ ಕಾರ್ಯ ನಡೆದಿದೆ. ಹೀಗಾದಲ್ಲಿ, ಪ್ರಜಾಪ್ರಭುತ್ವದ ತಳಹದಿಯೇ ಅಲುಗಾಡಲು ಪ್ರಾರಂಭವಾಗುವ ಕಾಲ ದೂರವಿರುವುದಿಲ್ಲ.
ಸಮಾಜದಲ್ಲಿ ಎಲ್ಲ ವ್ಯವಸ್ಥೆಗಳು ಸರಿಯಾಗಿ ನಡೆಯುತ್ತಿದೆಯೇ?ದೇಶದ ಎಲ್ಲ ಆಶೋತ್ತರಗಳನ್ನು ಈಡೇರಿಸಲಾಗುತ್ತಿದ್ದೆಯೇ, ಭ್ರಷ್ಟಾಚಾರ ಆರೋಪಗಳು ಪ್ರತಿನಿತ್ಯದ ವಿದ್ಯಮಾನಗಳಾಗಿವೆ. ಕಾನೂನು ಪಾಲನೆ ಮಾಡುತ್ತಿದ್ದಾರೋ ಅಥವಾ ಇಲ್ಲವೋ?ಈ ಎಲ್ಲಾ ಸಮಸ್ಯೆಗಳಿಗೆಸರ್ಕಾರವೇ ಕಾರಣ ಎಂದುಜನರು ಕಡ್ಡಿಮುರಿದಂತೆ ಹೇಳುತ್ತಾರೆ.  ಏಕೆಂದರೆ ಚುನಾವಣೆ ಸಮಯದಲ್ಲಿ ಪಕ್ಷಗಳು ಜನರಿಗೆ ಹೊಸ ಹೊಸ ಭರವಸೆ ನೀಡಿ ಆಧಿಕಾರಕ್ಕೆಬರುತ್ತವೆ.ಆದರೆ ಜನರಿಗೆ ನೀಡಿದ ಆಶೋತ್ತರಗಳನ್ನು ಈಡೇರಿಸಲೂ ಸರ್ಕಾರವಷ್ಟೇ ಅಲ್ಲ, ಎಲ್ಲ ಪಕ್ಷಗಳೂಒದ್ದಾಡುತ್ತವೆ. ಭ್ರಷ್ಟಾಚಾರದ ವಿರುದ್ಧ ಹೋರಾಡಿ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿ ಹಣ ಮಾಡುತ್ತಾರೆ(ಇದಕ್ಕೆ ಉದಾಹರಣೆ, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಪಕ್ಷದಲ್ಲಿದ್ದ ಮುಖಂಡ ಅರವಿಂದ್ ಕೇಜ್ರಿವಾಲ್ ವಿರುದ್ಧ ಅವರ ಪಕ್ಷದಲ್ಲಿದ್ದ ಮಂತ್ರಿಯೇ ಮಾಡಿರುವ ಭ್ರಷ್ಟಾಚಾರ ಆರೋಪ.
ರಾಜಕಾರಣದಲ್ಲಿ ಹಣ ಮಾಡುವುದು ಸಾಮಾನ್ಯ. ಇಡೀ ವ್ಯವಸ್ಥೆ ಈ ರೀತಿ ಆಗಿದೆ. ಇದಕ್ಕೆ ಯಾರನ್ನು ಹೊಣೆ ಮಾಡಲಾಗದು? ನಾವು ಕಾರಣವೇ ಅಥವಾ ವ್ಯವಸ್ಥೆ ಕಾರಣವೇ?  ಈ ಭ್ರಷ್ಟಾಚಾರರಾಜಕೀಯ ದಲ್ಲಿಮಾತ್ರವಲ್ಲ ಬೇರೆ ಕ್ಷೇತ್ರಗಳಲ್ಲಿ ಕೂಡ ಇದೆ. ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆ, ನ್ಯಾಯಾಂಗ, ಕಾರ್ಪೊರೇಟ್ ಕ್ಷೇತ್ರಸೇರಿದಂತೆ ಇನ್ನಿತರ ಕಡೆ ವ್ಯಾಪಕವಾಗಿರುವ ಭ್ರಷ್ಟಾಚಾರ ಪೆಡಂಭೂತದಂತೆಚಾಚಿಕೊಂಡಿದೆ. ಇಂತಹ ವ್ಯವಸ್ಥೆಗೆ ಕೊನೆ ಯಾವಾಗ?ಮುಖ್ಯವಾಗಿ ಯುವ ಜನಾಂಗ ಹೆಚ್ಚಾಗಿ ರಾಜಕೀಯಕ್ಕೆ ಬರಬೇಕು ಎಂದು ಹಿರಿಯ ರಾಜಕೀಯ ನಾಯಕರು, ಬುದ್ಧಿಜೀವಿ ಗಳು, ಸಾಹಿತಿಗಳು ಸಲಹೆ ನೀಡುತ್ತಾರೆ. ಆದರೆ ಕೆಟ್ಟ ರಾಜಕೀಯ ವ್ಯವಸ್ಥೆ ನೋಡಿ ಯುವ ಜನಾಂಗದವರಿಗೆ ಭ್ರಮನಿರಸನವಾಗಿದೆ. ರಾಜಕೀಯಕ್ಕೆ ಬಂದು ಅಭಿವೃದ್ಧಿ ಕೆಲಸ ಮಾಡುವ ಬದಲುಎಷ್ಟು ದುಡ್ಡು ಮಾಡಬೇಕು ಎಂದು ಲೆಕ್ಕ ಹಾಕುತ್ತಾರೆ. ಹಿರಿಯ ರಾಜಕಾರಣಿಗಳ ಹಾದಿಯನ್ನೇ ಕಿರಿಯರು ತುಳಿಯುತ್ತಾರೆ.

 

ಹೀಗಾಗಿ ಇಂದಿನ ಯುವ ಪೀಳಿಗೆ ಜವಾಬ್ದಾರಿಯಿಂದ ನುಣುಚಿ ಕೊಳ್ಳುವ ಬದಲು ಪೂರ್ವಾಗ್ರಹ ಪೀಡಿತ ಭಾವನೆಯಿಂದ ಹೊರ ಬಂದು ಸಮಾಜದ ಬದಲಾವಣೆಗೆ ಪ್ರಯತ್ನಿಸಬೇಕು. ಸಮಸ್ಯೆಗಳ ವಿರುದ್ಧ ಸಮಾಜದಲ್ಲಿ ಪ್ರಬಲ ಹೋರಾಟ ನಡೆಸಬೇಕಿದೆ ದೇಶದ ಅಭಿವೃದ್ಧಿಗೆ ಈ ಯುವ ಜನಾಂಗದ ಶಕ್ತಿ ಅನಿವಾರ್ಯವಾಗಿದೆ.  ಪ್ರಸ್ತುತ ರಾಜಕಾರಣದಲ್ಲಿ ಅಶ್ವಾಸನೆ ನೀಡುವುದೇ ನಿಜಕ್ಕೂ ದೊಡ್ಡ ಸವಾಲು. ಜನರಿಗೆ ಪೊಳ್ಳು ಭರವಸೆಗಳನ್ನು ನೀಡಿ, ಮಂಕುಬೂದಿ ಎರಚುವಕೀಳುರಾಜಕಾರಣ ಮಾಡಬಾರದು. ಇಂತಹ ರಾಜಕೀಯ ತತ್ವಗಳನ್ನು ಯುವ ಜನಾಂಗ ಬೆಳೆಸಿಕೊಳ್ಳಬಾರದು.
ಹೊಣೆಗಾರಿಕೆ ಮತ್ತು ದೂರದೃಷ್ಟಿ ಇಟ್ಟುಕೊಂಡು ಭವಿಷ್ಯದ ದಿನಗಳಲ್ಲಿ ಒಳ್ಳೆಯ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ಕೊಡಬೇಕು.ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು. ರಾಜಕೀಯಕ್ಕೆ ಬರುವ ಇಚ್ಛಾಶಕ್ತಿ ಯುವಕರಿಗೆ ಜಾಸ್ತಿ ಇದೆ. ಆದರೆ ರಾಜಕಾರಣದ ಬಗ್ಗೆ ತಿಳುವಳಿಕೆ ಕಡಿಮೆ ಇರುತ್ತದೆ. ಮೊದಲು ಅದನ್ನು ಕಲಿಯಬೇಕು. ಕಾಲ ಬದಲಾದಂತೆ ಹಳೆಯ ರಾಜಕೀಯ ತತ್ವಗಳನ್ನು ಹೊಸ ರೂಪ ನೀಡಿ ನವ ಪರಿಕಲ್ಪನೆಯೊಂದಿಗೆ ಜನ ಸೇವೆ ಮಾಡುವ ಉದಾತ್ತ ಮನೋಭಾವ ಬೇಕು.
ಮುಂಬರುವ ಚುನಾವಣೆಯಲ್ಲಿ ಪಕ್ಷಗಳುಗೂಂಡಾಗಿರಿ, ಭ್ರಷ್ಟಾಚಾರ, ಜಾತಿ ರಾಜಕಾರಣ ಕೊನೆಗಾಣಿಸಿ ಉತ್ತಮ ನಾಯಕತ್ವ, ಯುವ ಜನಾಂಗ, ಪ್ರಮಾಣಿಕ ಮತ್ತು ಅಭಿವೃದ್ಧಿಗಳಿಗೆ ಒತ್ತು ಕೊಡುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಜಾತಿ ರಾಜಕೀಯ ವ್ಯವಸ್ಥೆಯನ್ನು ಕಿತ್ತೊಗೆಯಬೇಕು.  ಸಮಾಜ ಬದಲಾವಣೆ ಆದರೆ ದೇಶ ಬದಲಾವಣೆ ಆಗುತ್ತೆ, ದೇಶದಲ್ಲಿ ಹೆಚ್ಚು ಅಭಿವೃದ್ಧಿಯಾದರೆ ವಿಶ್ವ ಮಟ್ಟದಲ್ಲಿ ದೇಶದ ಹೆಸರು ಉಜ್ವಲಿಸಲಿದೆ. ಉಜ್ವಲಿಸದಿದ್ದರೆ ಬೇರೆ ದಾರಿ ಇಲ್ಲ, ಉಜ್ಜಿ ಹೋಗುವುದೊಂದೇ ದಾರಿ. ಹೀಗೆ ದೇಶಗಳೇ ಸವೆದು, ನಶಿಸಿ ಹೋಗಿರುವ ದಾಖಲೆಗಳು ಇತಿಹಾಸದ ಪುಟಗಳಲ್ಲಿ ವಿಪುಲವಾಗಿವೆ. ಆದುದರಿಂದಲೇ ಈ ಲೇಖನದ ಕಳಕಳಿ ಕಾಳಜಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin