ಚುನಾವಣೆಗೆ ಸ್ಪರ್ಧಿಸಿರುವ ಹುಚ್ಚ ವೆಂಕಟ್‍ಗೆ ಸಿಕ್ಕಿತು ನೆಚ್ಚಿನ ಚಿಹ್ನೆ ‘ಎಕ್ಕಡ’

ಈ ಸುದ್ದಿಯನ್ನು ಶೇರ್ ಮಾಡಿ

Huccha--1
ಬೆಂಗಳೂರು, ಏ.28-ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟ, ನಿರ್ಮಾಪಕ, ನಿರ್ದೇಶಕ ಹುಚ್ಚ ವೆಂಕಟ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ನೈಜ ಶೈಲಿಯಲ್ಲೇ ಕನ್ನಡ ಸ್ವಾಭಿಮಾನದ ಪ್ರಶ್ನೆ ಮುಂದಿಟ್ಟುಕೊಂಡು ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ನಿನ್ನೆ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾದ್ದರಿಂದ ರಾಜ್ಯಾದ್ಯಂತ ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ತಿಳಿದಿದೆ. ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳು ಹೊರತಾಗಿ ಪಕ್ಷೇತರರಿಗೆ ಕ್ರಮಸಂಖ್ಯೆ ಹಾಗೂ ಚಿಹ್ನೆ ನೀಡಲಾಗಿದೆ. ಹುಚ್ಚ ವೆಂಕಟ್ ಅವರಿಗೆ ಚಪ್ಪಲಿ ಚಿಹ್ನೆ ನೀಡಲಾಗಿದೆ.

Facebook Comments

Sri Raghav

Admin