ಚುನಾವಣೆ ಕರ್ತವ್ಯದಲ್ಲಿ ಮೃತಪಟ್ಟಿದ್ದ ಕಾನ್‍ಸ್ಟೆಬಲ್ ಪತ್ನಿಗೆ 10ಲಕ್ಷ ಪರಿಹಾರ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Police-01
ಬೆಂಗಳೂರು, ಆ.1-ಕಳೆದ 2013ರಲ್ಲಿ ನಡೆದ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಕರ್ತವ್ಯದಲ್ಲಿ ಮೃತಪಟ್ಟಿದ್ದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಕಾನ್‍ಸ್ಟೆಬಲ್ ಸಿ.ಕೆ.ವಿಜಯ್‍ಕುಮಾರ್ ಅವರ ಪತ್ನಿಗೆ 10 ಲಕ್ಷ ಅನುಗ್ರಹಪೂರ್ವಕ ಪರಿಹಾರ ಧನವನ್ನು ಮಂಜೂರು ಮಾಡಿ ಸರ್ಕಾರ ಆದೇಶಿಸಿದೆ.

ವಿಜಯ್‍ಕುಮಾರ್ ಅವರ ಪತ್ನಿ ಕೆ.ಆರ್.ಶಾಂತಲಾ ಅವರಿಗೆ 10 ಲಕ್ಷ ರೂ. ಗಳನ್ನು ಸರ್ಕಾರ ಮಂಜೂರು ಮಾಡಿದೆ.2013ರ ಮೇ 7 ರಂದು ಸಾರ್ವತ್ರಿಕ ಚುನಾವಣಾ ಮತ ಎಣಿಕೆಯ ಬ್ರೀಫಿಂಗ್ ಸಭೆ ಮುಗಿಸಿಕೊಂಡು ತಮ್ಮ ಸ್ವಂತ ಮೋಟರ್‍ಸೈಕಲ್‍ನಲ್ಲಿ ಮನೆಗೆ ಮರಳುತ್ತಿದ್ದಾಗ ರಸ್ತೆ ಅಪಘಾತದಲ್ಲಿ ವಿಜಯ್‍ಕುಮಾರ್ ಮೃತಪಟ್ಟಿದ್ದರು.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಕರ್ತವ್ಯದ ಸಂದರ್ಭದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಅನುಗ್ರಹಪೂರ್ವಕ ಪರಿಹಾರ ಧನವನ್ನು ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿಜಯ್‍ಕುಮಾರ್ ಅವರ ಪತ್ನಿಗೆ ಸರ್ಕಾರ ಪರಿಹಾರ ಧನವನ್ನು ಮಂಜೂರು ಮಾಡಿ ಆದೇಶಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin