ಚುನಾವಣೆ ಘೋಷಣೆಯಾಗುವುದರೊಳಗೆ ವೀರಶೈವ, ಲಿಂಗಾಯಿತ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ

ಈ ಸುದ್ದಿಯನ್ನು ಶೇರ್ ಮಾಡಿ

Lingayt--.2

ಬೆಂಗಳೂರು, ಡಿ.24- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಆ ಸಮುದಾಯದ ಮತಗಳನ್ನು ಸೆಳೆಯಲು ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು , ವೀರಶೈವ, ಲಿಂಗಾಯಿತ ಸಮುದಾಯಕ್ಕೆ ಚುನಾವಣೆ ಘೋಷಣೆಯಾಗುವುದರೊಳಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಘೋಷಣೆಯಾಗುವ ಸಂಭವವಿದೆ.  ಎರಡು ದಿನಗಳ ಹಿಂದೆಯಷ್ಟೇ ರಾಜ್ಯ ಸರ್ಕಾರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಳು ಮಂದಿ ತಜ್ಞರ ಸಮಿತಿಯನ್ನು ರಚನೆ ಮಾಡಿತ್ತು.

ಈ ಸಮಿತಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್, ನವದೆಹಲಿಯ ಜವಹಾರ್ ನೆಹರೂ ವಿವಿ, ಕನ್ನಡ ವಿಭಾಗದ ಮುಖ್ಯಸ್ಥ ಪೆÇ್ರ.ಪುರುಷೋತ್ತಮ್ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ರಾಜಕೀಯ ವಿಶ್ಲೇಷಕ ಮುಜಾಫರ್ ಅಸಾದಿ ಹಾಗೂ ಪತ್ರಕರ್ತ ಸರ್ಜು ಕಟ್ಕರ್ ಈ ಸಮಿತಿಯ ಸದಸ್ಯರಾಗಿದ್ದಾರೆ. ಸಮಿತಿಯು ಒಂದು ತಿಂಗಳೊಳಗೆ ಕೂಲಂಕುಷವಾಗಿ ಅಧ್ಯಯನ ನಡೆಸಿ ಸರ್ಕಾರಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಸಂಬಂಧ ವರದಿಯನ್ನು ನೀಡಬೇಕು. 2018ರ ಜನವರಿ 6 ಅಥವಾ 8ರಂದು ಸಮಿತಿಯು ಮೊದಲ ಸಭೆ ನಡೆಸಲಿದೆ. ನಂತರ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅಭಿಪ್ರಾಯವನ್ನು ಸಂಗ್ರಹಿಸಿ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಸಮಿತಿಯು ವರದಿಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಕಾಯ್ದೆ 1994ರ ಪ್ರಕಾರ ಯಾವುದೇ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟದ್ದು. ಏಳು ಮಂದಿ ತಜ್ಞರ ತಂಡ ವರದಿ ನೀಡಿದ ಬಳಿಕ ಸರ್ಕಾರ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗುವ ಮೊದಲೇ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ತೀರ್ಮಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.  ಅಖಿಲ ಭಾರತ ವೀರಶೈವ ಮಹಾಸಭಾ, ವಿವಿಧ ಮಠಾಧೀಶರು ಸೇರಿದಂತೆ ಮತ್ತಿತರರಿಂದ ಅಭಿಪ್ರಾಯ ಸಂಗ್ರಹಿಸಿ ವೀರಶೈವ-ಲಿಂಗಾಯಿತ ಒಂದೆಯೇ ಇಲ್ಲವೇ ಈ ಎರಡೂ ಸಮುದಾಯವು ಪ್ರತ್ಯೇಕವೇ ಎಂಬುದನ್ನು ಸಮಿತಿಯು ತೀರ್ಮಾನಿಸಲಿದೆ.

ಯಾವುದೇ ಒಂದು ಸಮುದಾಯವನ್ನು ರಾಜ್ಯ ಸರ್ಕಾರ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವೆಂದು ಘೋಷಣೆ ಮಾಡಿದರೆ ಅದನ್ನು ಕೇಂದ್ರ ಸರ್ಕಾರವು ಮಾನ್ಯ ಮಾಡಲೇಬೇಕಾಗುತ್ತದೆ. ಕೇಂದ್ರ ಸರ್ಕಾರಕ್ಕೆ ಯಾವುದೇ ಹೊಸ ಧರ್ಮವನ್ನು ಸೃಷ್ಟಿಸುವುದಾಗಲಿ ಇಲ್ಲವೇ ರದ್ದುಪಡಿಸುವ ಅಧಿಕಾರವಿಲ್ಲ. ರಾಜ್ಯ ಸರ್ಕಾರಗಳು ಕಲಿಸಿದ ಶಿಫಾರಸ್ಸನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಅಧಿಕಾರ ಮಾತ್ರ ಕೇಂದ್ರಕ್ಕಿದೆ. 1996ರ ಅಲ್ಪಸಂಖ್ಯಾತ ಕಾಯ್ದೆ ರಾಷ್ಟ್ರೀಯ ಆಯೋಗ ವಿಭಾಗ 2(3)ರಡಿ ಈಗಾಗಲೇ ಮಹಾರಾಷ್ಟ್ರ , ತೆಲಂಗಾಣ ರಾಜ್ಯಗಳು ಅಲ್ಲಿನ ಕೆಲವು ಸಮುದಾಯಗಳನ್ನು ಧಾರ್ಮಿಕ ಅಲ್ಪಸಂಖ್ಯಾತವೆಂದು ಘೋಷಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ.

ಇದೀಗ ಇದೇ ಅಸ್ತ್ರವನ್ನು ಮುಂದಿಟ್ಟುಕೊಂಡಿರುವ ರಾಜ್ಯ ಸರ್ಕಾರ ಚುನಾವಣೆ ಘೋಷಣೆಯಾಗುವ ಮೊದಲೆ ಲಿಂಗಾಯಿತ ವೀರಶೈವ ಸಮುದಾಯಕ್ಕೆ ಪ್ರತ್ಯೇಕ ಧಾರ್ಮಿ ಸ್ಥಾನಮಾನ ಘೋಷಣೆ ಮಾಡಲು ತುದಿಗಾಲಲ್ಲಿ ನಿಂತಿದೆ. ಈ ಮೂಲಕ ಬಿಜೆಪಿಯ ಮಹದಾಯಿ ಅಸ್ತ್ರಕ್ಕೆ ಕಾಂಗ್ರೆಸ್ ಲಿಂಗಾಯಿತ ಅಸ್ತ್ರ ಬಳಸಲು ತೀರ್ಮಾನಿಸಿದೆ.

Facebook Comments

Sri Raghav

Admin