ಚುನಾವಣೆ ವೇಳೆ ಸೈಬರ್ ದಾಳಿ : ರಷ್ಯಾಗೆ ಒಮಾಮಾ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Omabam-Rassia

ವಾಷಿಂಗ್ಟನ್, ಡಿ.16-ಅಧ್ಯಕ್ಷೀಯ ಚುನಾವಣೆಯಲ್ಲಿ ಸೈಬರ್ ದಾಳಿಗಳನ್ನು ಕೈಗೊಂಡಿರುವ ರಷ್ಯಾ ವಿರುದ್ಧ ಅಮೆರಿಕ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅಧ್ಯಕ್ಷ ಬರಾಕ್ ಓಬಾಮಾ ಎಚ್ಚರಿಕೆ ನೀಡಿದ್ದಾರೆ. ಇಂಟರ್‍ನೆಟ್ ಹ್ಯಾಕಿಂಗ್‍ನಲ್ಲಿ ರಷ್ಯಾದ ಅತ್ಯುನ್ನತ ಅಧಿಕಾರಿಯೊಬ್ಬರು ನೇರವಾಗಿ ಷಾಮೀಲಾಗಿದ್ದಾರೆ ಎಂದು ಶ್ವೇತಭವನ ಆರೋಪಿಸಿದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷರು ಗುಡುಗಿದ್ದಾರೆ. ನಾನು ಈ ಹಗರಣದ ಅಂತಿಮ ವರದಿಯ ನಿರೀಕ್ಷೆಯಲ್ಲಿದ್ದೇನೆ. ನಮ್ಮ ಚುನಾವಣೆಗಳ ಏಕತೆಗೆ ಯಾವುದೇ ವಿದೇಶಿ ಸರ್ಕಾರವು ಹಸ್ತಕ್ಷೇಪ ಮಾಡಿ ಪರಿಣಾಮ ಬೀರಲು ಯತ್ನಿಸಿದರೆ ನಾವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅದನ್ನು ನಾವು ಮಾಡುತ್ತೇವೆ ಎಂದು ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸುತ್ತಿರುವ ಒಬಾಮಾ, ನ್ಯಾಷನಲ್ ಪಬ್ಲಿಕ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ರಾಜಕೀಯದಲ್ಲೇ ತಲ್ಲಣ ಮೂಡಿಸಿರುವ ಈ ಸ್ಪೋಟಕ ಮಾಹಿತಿಯನ್ನು ದೇಶದ ಬೇಹುಗಾರಿಕೆ ಸಂಸ್ಥೆ-ಸಿಐಎ ಬಹಿರಂಗಗೊಳಿಸಿತ್ತು. ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವ ರಷ್ಯಾ, ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಗೆಲ್ಲಲು ನೆರವು ನೀಡಿದೆ ಎಂದು ಸಿಐಎ ವರದಿ ತಿಳಿಸಿತ್ತು. ಆದರೆ ಈ ಆರೋಪಗಳನ್ನು ರಿಪಬ್ಲಿಕನ್ ಪಕ್ಷದ ಮುಖಂಡರು ತಳ್ಳಿ ಹಾಕಿದ್ದರು..

ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲ್ಲಬೇಕು ಎಂಬ ಉದ್ದೇಶದಿಂದ ಕೆಲವೆಡೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳ ಪರವಾಗಿ ರಷ್ಯಾ ರಹಸ್ಯವಾಗಿ ಕಾರ್ಯಾಚರಣೆ ನಡೆಸಿದ ಬಗ್ಗೆ ಮಾಹಿತಿ ಇದೆ ಎಂಬುದಾಗಿ ಸಿಐಎನ ರಹಸ್ಯ ಮËಲ್ಯಾಂಕನ ವರದಿಯಲ್ಲಿ ತಿಳಿಸಲಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವಿಸ್ಕøತ ವರದಿ ಮಾಡಿತ್ತು.

>  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin