ಚೆಕ್‍ಬೌನ್ಸ್ ಪ್ರಕರಣ : ಪ್ರಭುಸ್ವಾಮಿಗೆ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

cheue-baunce

ಚನ್ನರಾಯಪಟ್ಟಣ, ಅ.1- ಪಟ್ಟಣದ ಜೆ.ಎಂ.ಎಫ್.ಸಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ತಿಪಟೂರಿನ ಸೌಮ್ಯಶ್ರೀ ಕೊಬ್ಬರಿ ಅಂಗಡಿ ಮಾಲೀಕ ಪ್ರಭುಸ್ವಾಮಿಗೆ ಚೆಕ್‍ಬೌನ್ಸ್ ಪ್ರಕರಣದಲ್ಲಿ 10 ಸಾವಿರ ರೂ.ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಚನ್ನರಾಯಪಟ್ಟಣ ತಾಲೂಕಿನ ತುಪ್ಪದಹಳ್ಳಿ ಗ್ರಾಮದಲ್ಲಿ ಟಿ.ಎಸ್.ಪ್ರಕಾಶ್‍ರವರಿಗೆ ಕೊಬ್ಬರಿ ಮಾರಾಟದ ಹಣ 21 ಲಕ್ಷ ರೂ. ನಿಡದೇ ಸತಾಯಿಸುತ್ತಿದ್ದುದರಿಂದ 4 ವರ್ಷದ ಹಿಂದೆ ದೂರು ದಾಖಲಿಸಿದ್ದರಿಂದ ಪಟ್ಟಣದ ಜೆಎಂಎಫ್‍ಸಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಲಯಧೀಶರಾದ  ಎಂ.ಎಸ್.ಶಶಿಕಲಾ 21 ಲಕ್ಷದ ಹಣ ನೀಡುವ ಜೊತೆಗೆ ಶಿಕ್ಷೆಯ ತೀರ್ಪು ನೀಡಿದ್ದಾರೆ. ಪ್ರಭುಸ್ವಾಮಿ ನಾಗಮಂಗಲ ಇತರೆ ಕಡೆಯೂ ಚೆಕ್ ನೀಡಿ ನಂತರ ಚೆಕ್ ಕಳೆದುಹೋಗಿರುವುದಾಗಿ ಪತ್ರಿಕೆಯಲ್ಲಿ ಪ್ರಕಟಣೆ ನೀಡಿ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದರು ಎಂದು ಟಿ.ಎಸ್.ಪ್ರಕಾಶ್‍ರವರ ಪರ ವಕೀಲ ವಿಜಯ್‍ಕುಮಾರ್ ತಿಳಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin