ಚೆಕ್‍ಬೌನ್ಸ್: ಮಲ್ಯಗೆ ಜಾಮೀನುರಹಿತ ವಾರೆಂಟ್

ಈ ಸುದ್ದಿಯನ್ನು ಶೇರ್ ಮಾಡಿ

gSWDGSGS

ನವದೆಹಲಿ, ಆ.6-ಚೆಕ್‍ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಕೋಟ್ಯಂತರ ರೂಪಾಯಿಗಳ ಸುಸ್ತಿದಾರ  ಉದ್ಯಮಿ ವಿಜಯ್‍ಮಲ್ಯಗೆ ದೆಹಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ. ಇದರೊಂದಿಗೆ ಮದ್ಯದ ದೊರೆಗೆ ಮತ್ತೊಂದು ಕಾನೂನು ಕಂಟಕ ಎದುರಾಗಿದೆ. ವಿಜಯ್‍ಮಲ್ಯ ಈಗಾಗಲೇ ವಿವಿಧ ಬ್ಯಾಂಕ್‍ಗಳಲ್ಲಿ 9 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸಾಲಕ್ಕೆ ಉದ್ದೇಶಪೂರ್ವಕ ಸುಸ್ತಿದಾರರಾಗಿದ್ದಾರೆ. ಆಸ್ತಿ ಮುಟ್ಟುಗೋಲು ಸೇರಿದಂತೆ ಕಾನೂನಿನ ಉರುಳು ಅವರ ಕೊರಳನ್ನು ಬಿಗಿ ಮಾಡುತ್ತಿರುವಾಗಲೇ ಈ ಪ್ರಕರಣ ಮಲ್ಯ ಅವರಿಗೆ ಮತ್ತೊಂದು ಕಾನೂನು ತೊಡಕಾಗಿ ಪರಿಣಮಿಸಿದೆ.

Facebook Comments

Sri Raghav

Admin