ಚೆನ್ನೈನಲ್ಲಿ ಐಟಿ ದಾಳಿ : 90 ಕೋಟಿ ರೂ. ನಗದು ಮತ್ತು 100 ಕೆ.ಜಿ. ಚಿನ್ನ ಪತ್ತೆ…!

ಈ ಸುದ್ದಿಯನ್ನು ಶೇರ್ ಮಾಡಿ

IT-Raid

ಚೆನ್ನೈ. ಡಿ.08 : ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಚೆನ್ನೈನಲ್ಲಿ ಅತಿ ದೊಡ್ಡ ದಾಳಿ ನಡೆಸಿದ್ದು, ದಾಳಿಯ ವೇಳೆ ಸುಮಾರು 100 ಕೆ.ಜಿ. ಚಿನ್ನ ಹಾಗೂ 90 ಕೋಟಿ ನಗದನ್ನು ಜಪ್ತಿ ಮಾಡಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ಏಕಕಾಲಕ್ಕೆ ಚೆನ್ನೈನ ಎಂಟು ಕಡೆ ದಾಳಿ ನಡೆಸಿದ್ದು, ಕಾನೂನು ಬಾಹಿರವಾಗಿ ಸಂಗ್ರಹಿಸಿದ್ದ 2000 ರೂ. ಮುಖಬೆಲೆಯ 8 ಕೋಟಿ ರೂ. 65 ಕೋಟಿ ನಿಷೇಧಿತ ನೋಟುಗಳು, 28 ಕೋಟಿ ಮೌಲ್ಯದ 1 ಕೆಜಿ ತೂಕದ ಚಿನ್ನದ ಗಟ್ಟಿಗಳು ಸೇರಿದಂತೆ ಒಟ್ಟು 90 ಕೋಟಿ ರುಪಾಯಿ ಸಂಪತ್ತನ್ನು ಜಪ್ತಿ ಮಾಡಿದ್ದಾರೆ.

ಇಂದು ಬೆಳಗ್ಗೆ ಚೆನ್ನೈನ ಟಿ ನಗರ್ ಹಾಗೂ ಅಣ್ಣಾ ನಗರ್ ದಲ್ಲಿರುವ ಮೂರು ಚಿನ್ನದ ಅಂಗಡಿಗಳ ಮೇಲೆ ಹಾಗೂ ಮಾಲೀಕರ ಮನೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಶೇಖರ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ ಹಾಗೂ ಪ್ರೇಮ್ ಎಂಬ ವ್ಯಾಪಾರಿಗಳಿಗೆ ಸೇರಿದ, ಲೆಕ್ಕ ನೀಡದ ಮೊತ್ತ ಇದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಲವು ಆಸ್ತಿ ದಾಖಲೆಗಳು, ಲೆಕ್ಕಕ್ಕೆ ನೀಡದ ಆಸ್ತಿಗಳ ಬಗೆಗಿನ ಮಾಹಿತಿಯನ್ನು ಸಂಗ್ರಹಿಸಲು ಬಳಸುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ವಶಕ್ಕೆ ಪಡೆಯಲಾಗಿದೆ ಮತ್ತು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin