ಚೆನ್ನೈನಲ್ಲಿ ಮುಂದುವರಿದ ಭ್ರಷ್ಟರ ಭರ್ಜರಿ ಬೇಟೆ : ಇಂದು ಮತ್ತೆ 106 ಕೋಟಿ ರೂ. 127 ಕೆಜಿ ಚಿನ್ನ ವಶ

ಈ ಸುದ್ದಿಯನ್ನು ಶೇರ್ ಮಾಡಿ

Gold-Chennai

ಚೆನ್ನೈ, ಡಿ.9-ಮಹಾನಗರಿಯ ವಿವಿಧೆಡೆ ಇಂದು ಬೆಳಿಗ್ಗೆ ಕೂಡ ಭರ್ಜರಿ ಬೇಟೆ ಮುಂದುವರಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ವಿವಿಧೆಡೆ ದಾಳಿ ನಡೆಸಿ ಕನಿಷ್ಠ 106 ಕೋಟಿ ರೂ.ಗಳ ನಗದು ಮತ್ತು 127 ಕೆಜಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ನಿನ್ನೆಯೂ ವಿವಿಧೆಡೆ ದಾಳಿ ನಡೆಸಿದ ಐಟಿ 90 ಕೋಟಿ ರೂ.ನಗದು ಮತ್ತು 100 ಕೆಜಿ ಚಿನ್ನವನ್ನು ಜಫ್ತಿ ಮಾಡಿತ್ತು.   ಗರಿಷ್ಠ ಮËಲ್ಯದ ನೋಟುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ತೆರಿಗೆ ವಂಚನೆಯನ್ನು ತಡೆಗಟ್ಟಲು ಐಟಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಂಡ ಬೃಹತ್ ಪ್ರಮಾಣದ ನಗದು ಮತ್ತು ಚಿನ್ನಾಭರಣಗಳು ಇದಾಗಿದೆ. 500 ಮತ್ತು 1,000 ರೂ. ನೋಟು ನಿಷೇಧದ ಬಳಿಕ ಇದುವರೆಗೆ ದೇಶದ ನಾನಾ ಕಡೆ ನಡೆದ ದಾಳಿಯಲ್ಲಿ 130 ಕೋಟಿ ರೂ.ಗಳು ವಶವಾಗಿದ್ದರೆ, ಚೆನ್ನೈ ನಗರವೊಂದರಲ್ಲೇ 106 ಕೋಟಿ ರೂ. ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ.

ಚೆನ್ನೆನಲ್ಲಿ ನಡೆಸಲಾದ ದಾಳಿಯಲ್ಲಿ 1 ಕೆಜಿ ಗಟ್ಟಿಗಳಲ್ಲಿ 127 ಕೆಜಿ ಚಿನ್ನ ಹಾಗೂ 10 ಕೋಟಿ ರೂ. ಹೊಸ ಕರೆನ್ಸಿ ಸೇರಿದಂತೆ 96 ಕೋಟಿ ರೂ. ಹಳೆ ನೋಟುಗಳನ್ನು ಕಾರ್ಯಾಚರಣೆ ವೇಳೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಐಟಿ ಇಲಾಖೆ ಉನ್ನತಾಧಿಕಾರಿಗಳು ಹೇಳಿದ್ದಾರೆ.   ಹಲವೆಡೆ ದಾಳಿ : ಕಪ್ಪು-ಬಿಳಿ ಅಕ್ರಮ ವಹಿವಾಟು, ಲೇವಾದೇವಿ ನಡೆಸುತ್ತಿದ್ದ ಉದ್ಯಮಿ ಶೇಖರ್ ರೆಡ್ಡಿ, ಅವರ ಸಹಾಯಕ ಶ್ರೀನಿವಾಸ ರೆಡ್ಡಿ ಮತ್ತು ಅವರ ತಂಡ ಸೇರಿದಂತೆ ಏಜೆಂಟರಿಗೆ ಸೇರಿದ ಎಂಟು ಸ್ಥಳಗಳ ಮೇಲೆ ನಿನ್ನೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇಂದು ಬೆಳಿಗ್ಗೆ ಕೂಡ ದಾಳಿ ಮುಂದುವರಿದಿದ್ದ ಬಗೆದಷ್ಟು ನಗದು ಮತ್ತು ಚಿನ್ನ ಪತ್ತೆಯಾಗುತ್ತಿವೆ. ಈ ಸಂಬಂಧ ಕೆಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin