ಚೆನ್ನೈನ ವಿಮಾನ ನಿಲ್ದಾಣದಲ್ಲಿ 1.34 ಕೋಟಿ ಹಣ ಜಪ್ತಿ

ಈ ಸುದ್ದಿಯನ್ನು ಶೇರ್ ಮಾಡಿ

200-nOtes-01

ಚೆನ್ನೈ, ಡಿ.22- ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಅಕ್ರಮ ಹಣ-ಕಾಳಧನದ ವಿರಾಟ ರೂಪವೇ ಅನಾವರಣಗೊಳ್ಳುತ್ತಿದೆ. ಇಲ್ಲಿನ ವಿಮಾನ ನಿಲ್ದಾಣದ ಬಳಿ ಆದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಐವರನ್ನು ಬಂಧಿಸಿ 1.34 ಕೋಟಿ ರೂ. ಹೊಸ ಕರೆನ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಐವರ ಬಳಿ 2000ರೂ. ಮುಖಬೆಲೆಯ 1.34 ಕೋಟಿ ರೂ.ಗಳ ಗರಿಗರಿ ನೋಟುಗಳು ಇದ್ದವು. ಅದಕ್ಕೆ ಸಂಬಂಧಪಟ್ಟಂತೆ ಯಾವುದೇ ದಾಖಲೆಗಳು ಅವರ ಬಳಿ ಇರಲಿಲ್ಲ. ಐವರನ್ನು ಅಧಿಕಾರಿಗಳು ತೀವ್ರ ತನಿಖೆಗೆ ಒಳಪಡಿಸಿದ್ದಾರೆ.
ಕಾಳಧನಿಕ ಶೇಖರ್ ರೆಡ್ಡಿ ಮತ್ತು ತಮಿಳುನಾಡು ಸರ್ಕಾರ ಸಸ್ಪೆಂಡ್‍ಗೊಂಡ ಮುಖ್ಯ ಕಾರ್ಯದರ್ಶಿ ರಾಮಮೋಹನ್ ರಾವ್‍ಗೂ ಬಂಧಿತರಿಗೂ ಸಂಬಂಧವಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ.

ಕಳೆದ ವಾರದ ಹಿಂದಷ್ಟೆ ಪಶ್ಚಿಮ ಬಂಗಾಳ ಮತ್ತು ಗೋವಾದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಕೆಲವರನ್ನು ಬಂಧಿಸಿ ಇಷ್ಟೇ ಮೊತ್ತದ ಹೊಸ ಮತ್ತು ಹಳೆ ನೋಟುಗಳನ್ನು ವಶಪಡಿಸಿಕೊಂಡಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin