ಚೆನ್ನೈ ಜೈಲಿಗೆ ಚಿನ್ನಮ್ಮ ಶಿಫ್ಟ್..?

ಈ ಸುದ್ದಿಯನ್ನು ಶೇರ್ ಮಾಡಿ

Sasikala--01

ಚೆನ್ನೈ, ಫೆ.20- ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‍ನಿಂದ ಶಿಕ್ಷಕೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನಅಗ್ರಹಾರ ಕಾರಾಗೃಹದಲ್ಲಿರುವ ಶಶಿಕಲಾ ನಟರಾಜನ್ ಅವರನ್ನು ಚೆನ್ನೈ ಜೈಲಿಗೆ ವರ್ಗಾಯಿಸಲು ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಮಳನಿಸ್ವಾಮಿ ತಿಳಿಸಿದ್ದಾರೆ.  ಇದಕ್ಕಾಗಿ ಎಲ್ಲಾ ರೀತಿಯ ಕಾನೂನು ಹೋರಾಟಕ್ಕೂ ನಾವು ಬದ್ಧರಾಗಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ದಾರೆ. ತಮಿಳುನಾಡಿನಲ್ಲಿ 500 ಮದ್ಯದಂಗಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ ಮತ್ತು ಬಡಗರ್ಭಿಣಿಯರಿಗೆ 12ರಿಂದ 18 ಸಾವಿರ ರೂ.ಗಳ ನೆರವು ನೀಡುವುದಾಗಿ ಅವರು ಇದೇ ವೇಳೆ ತಿಳಿಸಿದರು.

ಜೈಲು ಅಧಿಕಾರಿಗಳಿಗೆ ಶಶಿಕಲಾ ಮನವಿ : 

ವಿಕೆ ಶಶಿಕಲಾ ಅವರು ತಮ್ಮನ್ನು ಚೆನ್ನೈನ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಫೆ.15ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ಅವರು ಇಂದು ತಮ್ಮ ವಕೀಲರ ಜೊತೆ ಚರ್ಚಿಸಿ ತಮ್ಮನ್ನು ಚೆನ್ನೈನ ಜೈಲಿಗೆ ವರ್ಗಾಯಿಸುವಂತೆ ಕೋರಿ ಜೈಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜೈಲು ಅಧಿಕಾರಿಗಳು ಶಶಿಕಲಾ ಮನವಿ ತಮ್ಮ ಕೈ ಸೇರಿದ್ದು, ಈ ಬಗ್ಗೆ ಚೆನ್ನೈನ ಜೈಲು ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin