ಚೆಲುವನಾರಾಯಣನ ದರ್ಶನ ಪಡೆದ ಆಂಧ್ರ-ತೆಲಂಗಾಣದ ರಾಜ್ಯಪಾಲ ನರಸಿಂಹನ್

ಈ ಸುದ್ದಿಯನ್ನು ಶೇರ್ ಮಾಡಿ

Telangana--1

ಮೇಲುಕೋಟೆ, ಜೂ.19- ದಿವ್ಯಕ್ಷೇತ್ರವಾದ ಮೇಲುಕೋಟೆಯ ಸೌಂದರ್ಯ ಮೂರ್ತಿ ಶ್ರೀಚೆಲುವನಾರಾಯಣಸ್ವಾಮಿ ಮತ್ತು ಭಗವದ್ ರಾಮಾನುಜರ ದರ್ಶನ ಪಡೆದು ಪುನೀತನಾಗಿದ್ದೇನೆ ಎಂದು ಆಂಧ್ರ ಮತ್ತು ತೆಲಂಗಾಣದ ರಾಜ್ಯಪಾಲ ನರಸಿಂಹನ್ ತಿಳಿಸಿದರು. ದಂಪತಿ ಸಮೇತರಾಗಿ ಮೇಲುಕೋಟೆಗೆ ಭೇಟಿನೀಡಿ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಹುದಿನಗಳಿಂದ ಇಲ್ಲಿಗೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆಯಬೇಕೆಂಬ ಅಪೇಕ್ಷೆ ಇತ್ತು ಆದರೆ ಅದು ಸಾಧ್ಯವಾಗಿರಲಿಲ್ಲ ಇಂದು ಸಂಬಂಧಿಕರ ಉಪನಯನ ಇರುವ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದಿದ್ದೇನೆ ಇದಕ್ಕಿಂತ ಸೌಭಾಗ್ಯ ಬೇರೆ ಇಲ್ಲ ಎಂದರು.
ದೇವರದರ್ಶನ ನಂತರ ವೇದ ವೇದಾಂತ ಬೋಧಿನಿ ಸಂಸ್ಕøತ ಪಾಠಶಾಲೆಗೆ ಭೇಟಿ ನೀಡಿದ್ದರು.

ಮೇಲುಕೋಟೆಗೆ ಭೇಟಿ ನೀಡಿದ ರಾಜ್ಯಪಾಲ ನರಸಿಂಹನ್ ರನ್ನು ಸರ್ಕಾರ ಮತ್ತು ದೇವಾಲಯದ ಪರವಾಗಿ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಸ್ವಾಗತಿಸಿದರು. ನಂತರ ದೇವಾಲಯಕ್ಕೆ ಆಗಮಿಸಿದ ರಾಜ್ಯಪಾಲರಿಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ಈವೇಳೆ ಪಾಂಡವಪುರ ತಹಶೀಲ್ದಾರ್ ಹನುಮಂತರಾಯಪ್ಪ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ, ಮೇಲುಕೋಟೆ ಗ್ರಾ.ಪಂ ಅಧ್ಯಕ್ಷ ನಾರಾಯಣ ಭಟ್ಟರ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಮೇಲುಕೋಟೆ ಎಸ್.ಐ. ಮೊಹನ್ ಡಿ.ಪಾಟೀಲ್ ಪೊಲೀಸ್ ಭದ್ರತೆ ಮಾಡಿದ್ದರು.   ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದ ಅವರು, ಇಂದು ಬೆಳಿಗ್ಗೆ 8 ಗಂಟೆಗೆ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ಮತ್ತು ನಿಮಿಷಾಂಬಾದೇವಿಯ ದರ್ಶನ ಪಡೆದು, ನಂತರ ಮತ್ತೆ ಮೇಲುಕೋಟೆಗೆ ಆಗಮಿಸಿ ಅಹೋಬಿಲ ಮಠದಲ್ಲಿ ನಡೆಯುವ ಬ್ರಹ್ಮೋಪದೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗನರಸಿಂಹಸ್ವಾಮಿಯ ದರ್ಶನ ಪಡೆದರು ಎಂದು ರಾಜ್ಯಪಾಲರ ಕುಟುಂಬ ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin