ಚೈನಾ ಒಪನ್ ಪ್ರಶಸ್ತಿ ಗೆದ್ದ ಪಿ.ವಿ.ಸಿಂಧುಗೆ ಮೋದಿ, ಸಚಿನ್ ಶುಭಾಶಯ

ಈ ಸುದ್ದಿಯನ್ನು ಶೇರ್ ಮಾಡಿ

PVS

ನವದೆಹಲಿ, ನ.21- ಚೈನಾ ಒಪನ್ ಪ್ರಶಸ್ತಿ ಪದಕ ವಿಜೇತೆಯಾದ ಪಿ.ವಿ.ಸಿಂಧು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಶುಭಾಶಯಗಳನ್ನು ಕೋರಿದ್ದಾರೆ. ರಿಯೊ ಒಲಿಂಪಿಕ್ಸ್‍ನ ಬೆಳ್ಳಿ ಪದಕ ಗೆದ್ದ ಸಿಂಧು ಅವರು ಈಗ ಚೈನಾ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ಮೊದಲ ಸೂಪರ್ ಸೀರಿಸ್ ಗೆದ್ದಿರುವ ಸಿಂಧು ಮುಂದಿನ ಸರಣಿಗಳಲ್ಲೂ ಉತ್ತಮ ಪ್ರದರ್ಶನವನ್ನು ತೋರಲಿ ಎಂದು ಮೋದಿ ಶುಭ ಹಾರೈಸಿದರೆ, ಗೆಲ್ಲುವ ಓಟದಲ್ಲಿ ಮುನ್ನುಗ್ಗುತ್ತಿರುವ ಸಿಂಧು ಅವರ ಮುಂದಿನ ಜೀವನವು ಶುಭಕರವಾಗಿರಲಿ ಎಂದು ಸಚಿನ್ ಶುಭ ಕೋರಿದ್ದಾರೆ.

ನಿನ್ನೆ ನಡೆದ ಚೈನಾ ಓಪನ್ ಟೆನ್ನಿಸ್‍ನಲ್ಲಿ ಚಿನಾದ ಸುನ್ ಯು ವಿರುದ್ಧ ಪಿ.ವಿ. ಸಿಂಧು 21-11, 17-21, 21-11 ಸೆಟ್‍ಗಳಿಂದ ಪ್ರಶಸ್ತಿ ಜಯಿಸುವ ಮೂಲಕ ಈ ಪ್ರಶಸ್ತಿ ಗೆದ್ದ ಎರಡನೆ ಬ್ಯಾಡ್ಮಿಂಟನ್ ಆಟಗಾರ್ತಿ ಎಂದು ಬಿಂಬಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2014ರಲ್ಲಿ ಸೈನಾ ನೆಹ್ವಾಲ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin