ಚೊಚ್ಚಲ ಪಂದ್ಯದಲ್ಲೇ ಆಕರ್ಷಕ ಆಟವಾಡಿದ ಜೆನಿಂಗ್ಸ್ : ಉತ್ತಮ ಆರಂಭ ಪಡೆದ ಆಂಗ್ಲರು

ಈ ಸುದ್ದಿಯನ್ನು ಶೇರ್ ಮಾಡಿ

jessing

ಮುಂಬೈ, ಡಿ.8- ಪದಾರ್ಪಣೆ ಮಾಡಿದ ಚಚ್ಚಲ ಪಂದ್ಯದಲ್ಲೇ ಅದ್ಭುತ ಆಟವಾಡಿದ ಯುವ ಆಟಗಾರ ಕಿಟನ್ ಜೆನ್ನಿಕ್ಸ್ ಅವರ ಸಮಚ್ಚಿತ ಆಟದ ನೆರವಿನಿಂದ ಇಂಗ್ಲೆಂಡ್ ಆತಿಥೇಯ ಭಾರತದ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯಿತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಆರಂಭವಾದ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.  ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ತಿರುಗೇಟು ನೀಡುವ ಉಮ್ಮಸಿನಲ್ಲಿರುವ ಆಂಗ್ಲರ ತಂಡದಿಂದ ನಾಯಕ ಅಲೆಸ್ಟರ್‍ಕುಕ್ ಹಾಗೂ ಕಿಟನ್ ಜೆನ್ನಿಕ್ಸ್ ಇನ್ನಿಂಗ್ಸ್ ಆರಂಭಿಸಿದರು. ಆರಂಭದಲ್ಲಿ ಭಾರತದ ಬೌಲರಗಳನ್ನು ಸಮರ್ಥವಾಗಿ ಎದುರಿಸಿದ ಆರಂಭಿಕರು ಮೊದಲನೆ ವಿಕೆಟ್ ಜತೆಯಾಟದಲ್ಲಿ 25.3 ಓವರ್‍ಗಳಲ್ಲೇ 99 ರನ್ನು ಪೇರಿಸಿದರು. ಉತ್ತಮ ಆಟವಾಡಿದ ಕುಕ್ 60 ಎಸೆತಗಳಲ್ಲಿ 5 ಬೌಂಡರಿ ಮೂಲಕ 46 ರನ್ ದಾಖಲಿಸಿ ಜಡೇಜ ಬೌಲಿಂಗ್‍ನಲ್ಲಿ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಅವರ ಅದ್ಭುತ ಸ್ಟಂಪ್‍ಗೆ ಬಲಿಯಾದರು.

ಜೆನ್ಸಿಕ್ಸ್ ಪದಾರ್ಪಣೆ:

ಆರಂಭಿಕ ಬ್ಯಾಟ್ಸ್‍ಮನ್ ಹಸೀಮ್ ಅಮೀದ್ ಗಾಯಗೊಂಡು ಹೊರಗುಳಿದಿದ್ದರಿಂದ ಕಿಟನ್ ಜೆನ್ನಿಕ್ಸ್ ಪದಾರ್ಪಣೆ ಮಾಡಿದರು. ಕುಕ್ ಜತೆ ಇನ್ನಿಂಗ್ಸ್ ಆರಂಭಿಸಿದ ಅವರು, ಕುಕ್‍ಗೆ ಸಾಥ್ ನೀಡಿ ರಕ್ಷಣಾತ್ಮಕ ಆಟವಾಡಿದರು. ಮೊದಲ ವಿಕೆಟ್‍ನಲ್ಲಿ 99ರನ್ ಜತೆಯಾಟವಾಡಿದರು. ಪದಾರ್ಪಣೆ ಮಾಡಿದ ಚೊಚ್ಚಲ ಪಂದ್ಯದಲ್ಲಿ ಆಕರ್ಷಕ ಅಜೇಯ ಅರ್ಧಶತಕ ಬಾರಿಸಿ ಶತಕದತ್ತ ಮುಖ ಮಾಡಿದ್ದಾರೆ. ಕುಕ್ ಔಟಾದ ಬಳಿಕ ರೂಟ್‍ಗೆ ಸಾಥ್ ನೀಡಿ ಆಟವಾಡಿದ ಜೆನ್ನಿಕ್ಸ್ ಪ್ರವಾಸಿ ತಂಡದ ಬೌಲರ್‍ಗಳ ಸವಾಲನ್ನು ಎದುರಿಸಿದರು. ಎರಡನೇ ವಿಕೆಟ್ ಜತೆಯಾಟದಲ್ಲಿ 37ರನ್ ಪೇರಿಸಿದರು.

ಒಂದು ವಿಕೆಟ್‍ನಷ್ಟಕ್ಕೆ 136ರನ್ ಸೇರಿಸಿ ಉತ್ತಮ ಸ್ಥಿತಿಯಲ್ಲಿದ್ದಾಗ ರೂಟ್ 21 ಅಶ್ವಿನಿ ಬೌಲಿಂಗ್‍ನಲ್ಲಿ ನಾಯಕ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ನಡುವೆ ಎರಡು ವಿಕೆಟ್ ಕಳೆದುಕೊಂಡರೂ ಜೆನ್ನಿಕ್ಸ್ ತಮ್ಮ ನೈಜ್ಯ ಆಟವಾಡಿದರು. ವಿರಾಮದ ವೇಳೆಗೆ ಆಂಗ್ಲರು 48.2 ಓವರ್‍ಗಳಲ್ಲಿ 166ರನ್ ಕಲೆಹಾಕಿದರು. ಜೆನ್ನಿಕ್ಸ್ ಅಜೇಯ 89, ಅಲಿ 9ರನ್ ಗಳಿಸಿದರು. ಭಾರತ ಪರ ರವಿಚಂದ್ರನ್ ಅಶ್ವಿನ್, ಜಡೇಜ ತಲಾ ಒಂದು ವಿಕೆಟ್ ಉರುಳಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin