ಚೌಡೇಶ್ವರಿ ಬ್ರಹ್ಮ ರಥೋತ್ಸವ
ಆನೇಕಲ್. ಅ. 17- ತಾಲ್ಲೂಕಿನ ನಾರಾಯಣಘಟ್ಟ ಗ್ರಾಮದ ಗ್ರಾಮ ದೇವತೆಯಾದ ಚೌಡೇಶ್ವರಿ ಅಮ್ಮನವರ ಬ್ರಹ್ಮ ರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಗಣಪತಿ ಪೂಜೆ, ಕಳಸ ಸ್ಥಾಪನೆ, ಯಾಗ ಮಂಟಪ, ಮೂಲ ವಿಗ್ರಹಕ್ಕೆ ಅಭಿಷೇಕ, ಸಹಸ್ರ ಮೋದಕ ಹೋಮ, ಶ್ರೀ ಚೌಡೇಶ್ವರಿ ಮೂಲ ಮಂತ್ರ ಹೋಮ, ಬೈರೇಶ್ವರ, ಸೋಮೇಶ್ವರ ಉತ್ಸವ ಮೂರ್ತಿಗೆ ಅಭಿಷೇಕ ಅಲಂಕಾರ, ಕಳಶೋತ್ಸವ, ದುರ್ಗಸೂಕ್ತ ಹೋಮ, ಲಲಿತಾ ಸಹಸ್ರನಾಮ ಹೋಮ, ಶ್ರೀ ಸೂಕ್ತ, ದುರ್ಗಾ ಸೂಕ್ತ ಹೋಮ, ದೇವತಾ ಹೋಮ, ಅಷ್ಟವಸಾನ ಸೇವೆಗಳಲ್ಲಿ ಶ್ರದ್ಧಾ ಭಕ್ತಿಯಿಂದ ಭಕ್ತರು ಭಾಗಿಯಾಗಿ ಚೌಡೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಪವಿತ್ರ ಜಯಪ್ರಕಾಶ್, ಚೌಡೇಶ್ವರಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಎನ್. ರಾಮಚಂದ್ರಾರೆಡ್ಡಿ, ಪಂಚಾಯಿತಿ ಸದಸ್ಯರಾದ ಮಂಜುಳ ರಮೇಶ್ರೆಡ್ಡಿ, ಶಿವಕುಮಾರ್, ಮುಖಂಡರಾದ ಸೋಂಪುರ ಅಂಬರೀಶ್ ರೆಡ್ಡಿ, ನಾರಾಯಣಘಟ್ಟ ಪ್ರಭಾಕರ್ ರೆಡ್ಡಿ, ಈಶ್ವರ್ರೆಡ್ಡಿ, ಖಚಾಂಚಿ ವಿ.ಎನ್. ರಾಮಸ್ವಾಮಿರೆಡ್ಡಿ, ಮುಖಂಡರಾದ ಜಯಶಂಕರ್ರೆಡ್ಡಿ ಮತ್ತಿತರು ಹಾಜರಿದ್ದರು.
► Follow us on – Facebook / Twitter / Google+