ಛಾಲೆಂಜಿಂಗ್ ಸ್ಟಾರ್ ದರ್ಶನ್ @40

ಈ ಸುದ್ದಿಯನ್ನು ಶೇರ್ ಮಾಡಿ

Darshan 1

ಬೆಂಗಳೂರು, ಫೆ.16- ಸ್ಯಾಂಡಲ್‍ವುಡ್‍ನ ಛಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರಿಗಿಂದು 40ರ ಹುಟ್ಟುಹಬ್ಬದ ಸಂಭ್ರಮ. 40ನೆ ವಸಂತಕ್ಕೆ ಕಾಲಿರಿಸಿದ ನೆಚ್ಚಿನ ನಟನಿಗೆ ಅಭಿಮಾನಿಗಳ ಶುಭಾಶಯಗಳ ಮಹಾಪೂರವೇ ಹರಿದುಬಂತು. ರಾತ್ರಿಯಿಂದಲೇ ರಾಜರಾಜೇಶ್ವರಿನಗರದ ಅವರ ನಿವಾಸದ ಮುಂದೆ ಜಮಾಯಿಸಿದ ಸಾವಿರಾರು ಅಭಿಮಾನಿಗಳು ಜೈಕಾರ ಕೂಗುತ್ತ ಕೇಕ್ ಕತ್ತರಿಸಿ ಹುಟ್ಟುಹಬ್ಬದ ಶುಭ ಕೋರಿದರು.  ಕೇವಲ ಬೆಂಗಳೂರಿನ ಅಭಿಮಾನಿಗಳಲ್ಲದೆ ತುಮಕೂರು, ದಾವಣಗೆರೆ, ಚಿತ್ರದುರ್ಗ, ಕೋಲಾರ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅಭಿಮಾನಿಗಳು ಹುಟ್ಟುಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.

Darshan-5

ಪ್ರತಿ ಹುಟ್ಟುಹಬ್ಬಕ್ಕಿಂತ ಈ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದಲೇ ಅಭಿಮಾನಿಗಳು ಆಚರಿಸಿದರು. ವಿಶೇಷವೆಂದರೆ, ವಿಕಲಚೇತನರು ಸಹ ಆಗಮಿಸಿ ನಟನಿಗೆ ಶುಭ ಕೋರಿದರು.
ಮೆಜಸ್ಟಿಕ್ ಚಲನಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಕರಿಯ, ದಾಸ, ಕಲಾಸಿಪಾಳ್ಯ, ಸುಂಟರಗಾಳಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಸಾರಥಿ, ನವಗ್ರಹ, ಅಯ್ಯ, ಐರಾವತ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.   ಈ ಸಂದರ್ಭದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ದರ್ಶನ್ ಅವರು, ಇದು ನನ್ನ ಹುಟ್ಟುಹಬ್ಬದ ದಿನವಲ್ಲ, ಅಭಿಮಾನಿಗಳ ದಿನ. ನನ್ನನ್ನು ಒಬ್ಬ ನಾಯಕನಟನಾಗಿ ಸ್ವೀಕರಿಸಿ ಸದಾ ಪ್ರೋತ್ಸಾಹಿಸುತ್ತ ನನ್ನ ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು ಎಂದರು.

Darshan-4

ಚಕ್ರವರ್ತಿ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ತಮ್ಮ ಮುಂದಿನ 50ನೆ ಚಿತ್ರ ಓಂ ಬ್ಯಾನರ್‍ನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ತಾರಕ್ ಚಲನಚಿತ್ರ ಸೆಟ್ಟೇರಿದೆ ಎಂದರು.  ಒಟ್ಟಿನಲ್ಲಿ ಅಭಿಮಾನಿಗಳು ಹಾಗೂ ತಾಯಿ ಮೀನಾ ತೂಗುದೀಪ್ ಜತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸಿದರು. ಇಂದು ಎಲ್ಲಿಗೂ ಹೋಗುವುದಿಲ್ಲ. ನನಗೆ ಶುಭ ಕೋರಲು ಬರುವ ಅಭಿಮಾನಿಗಳೊಂದಿಗೆ ಕಾಲ ಕಳೆಯುತ್ತೇನೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Darshan-2

Darshan-3

Facebook Comments

Sri Raghav

Admin