ಜಂತಕಲ್ ಗಣಿಗಾರಿಕೆಗೂ, ಸರಕಾರಕ್ಕೂ ಸಂಬಂಧವಿಲ್ಲ : ಟಿ.ಬಿ.ಜಯಚಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

TB--JAYACHANDRA

ತುಮಕೂರು, ಮೇ 22-ಜಂತಕಲ್ಲು ಮೈನಿಂಗ್ ಮತ್ತು ಕರ್ನಾಟಕ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಎಸ್‍ಐಟಿಗೆ ಖಾಸಗಿಯೊಬ್ಬರು ನೀಡಿದ ದೂರಿನಿಂದ ನಡೆಯುತ್ತಿರುವ ಪ್ರಕರಣ ಇದಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.  ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತುಮಕೂರಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಹಿಂದೆ ಸದರಿ ಕೇಸಿಗೆ ತಡೆಯಾಜ್ಞೆ  ಇದ್ದ ಪರಿಣಾಮ ವಿಚಾರಣೆ ನಡೆಯುತ್ತಿರಲಿಲ್ಲ. ಆದರೆ ಇತ್ತೀಚಗೆ ಸುಪ್ರಿಂಕೋರ್ಟು ತಡೆಯಾಜ್ಞೆ  ತೆರವುಗೊಳಿಸಿ, ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚಿಸಿದೆ.ಸರಕಾರ ಹಸ್ತಕ್ಷೇಪ ಮಾಡುವ ಪ್ರಮಯವೇ ಬರುವುದಿಲ್ಲ ಎಂದರು.ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಒಟ್ಟು ಮೂರು ಕಡೆ ತನಿಖೆ ನಡೆಯುತ್ತಿದೆ. ಎಸ್‍ಐಟಿ, ಲೋಕಾಯುಕ್ತ ಮತ್ತು ಸಿಬಿಐನಿಂದ ತನಿಖೆ ನಡೆಸಲಾಗುತ್ತದೆ. ಎಸ್‍ಐಟಿ ಯಿಂದ ಒಟ್ಟು 70 ಪ್ರಕರಣಗಳು ತನಿಖೆ ನಡೆಯುತ್ತಿದೆ. 28ರಲ್ಲಿ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ. ಹೈಕೋರ್ಟಿನಲ್ಲಿ ಐದು ಕೇಸುಗಳಿಗೆ ಮಾತ್ರ ತಡೆಯಾಜ್ಞೆ  ಇದೆ.ಇದುವರೆಗೆ 106 ಕೋಟಿ ರೂಗಳ ಅಕ್ರಮ ಅದಿರನ್ನು ಹರಾಜು ಹಾಕಿ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.ಮತ್ತೊಮದು 205 ಕೋಟಿ ರೂ ಅಕ್ರಮ ಅದಿರು ಹರಾಜು ಬಾಕಿ ಇದೆ ಎಂದು ತಿಳಿಸಿದರು.

ಚುನಾವಣೆಗೂ ಮುನ್ನ ಅಕ್ರಮ ಗಣಿಗಾರಿಕೆ ವಿರುದ್ದ ಮೈಸೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್ ಏನು ಮಾಡಲಿಲ್ಲ ಎಂಬ ಅಪಾದನೆ ಇದೆ. ಆದರೆ ಪಕ್ಷದ ಗಣಿಗಾರಿಕೆ ವಿರುದ್ದ ಸುಮ್ಮನೆ ಕುಳಿತಿಲ್ಲ.ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ನೀಡಿದ್ದ ಮೊದಲ ಮತ್ತು ಎರಡನೇ ವರದಿಯ ಅನ್ವಯ ಅಕ್ರಮ ಗಣಿಗಾರಿಕೆ ವಿರುದ್ದ ಸಚಿವ ಸಂಪುಟ ಉಪಸಮಿತಿ ನೇಮಿಸಿ ತನಿಖೆಯ ಮೇಲುಸ್ತುವಾರಿ ಮಾಡಲಾಗುತ್ತಿದೆ.ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲವೆಂದು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ರಾಷ್ಟ್ರೀಯ ಪಕ್ಷವೊಂದು ಚೀಪ್ ಗಿಮಿಕ್‍ಗೆ ಇಳಿಯಬಾರದು:

ರಾಜ್ಯದಲ್ಲಿ ಮಳೆಯಾಗುತ್ತಿರುವಾಗ ಬರ ಅಧ್ಯಯನಕ್ಕೆ ಹೊರಟಿರುವ ಬಿಜೆಪಿ ಮುಖಂಡರು,ದಲಿತರ ಮನೆಯಲ್ಲಿ ಹೊಟೇಲ್ ತಿಂಡಿ ತಿಂದು ಚುನಾವಣೆ ಗಿಮಿಕ್ ಮಾಡಲು ಹೊರಟಿದ್ದಾರೆ. ರಾಷ್ಟ್ರೀಯ ಪಕ್ಷವೊಂದು ಈ ರೀತಿ ಡೊಂಗಿತನ ಪ್ರದರ್ಶಿಸುವುದು ಒಳ್ಳೆಯದಲ್ಲ.ಜನರಿಗೆ ಈಗಾಗಲೇ ಗೊತ್ತಾಗಿದೆ, ಹಾಗಾಗಿಯೇ ಉಪಚುನಾವಣೆಗಳಲ್ಲಿ ಸರಿಯಾದ ತೀರ್ಮಾನ ನೀಡಲಿದ್ದಾರೆ ಎಂದರು.  ಈ ವೇಳೆ ಶಾಸಕ ಡಾ.ರಫೀಕ್ ಅಹಮದ್,ಮಾಜಿ ಶಾಸಕ ಎಸ್.ಷಪಿ ಅಹಮದ್ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin