ಜಂಬೂ ಸವಾರಿಯ ಆನೆಗಳ ಪಟ್ಟಿ ರೆಡಿ

ಈ ಸುದ್ದಿಯನ್ನು ಶೇರ್ ಮಾಡಿ

S-Dasara-Elephants

ಮೈಸೂರು,ಜು.14-ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು 16 ಆನೆಗಳ ಪಟ್ಟಿಯನ್ನು ಸಿದ್ದಪಡಿಸಲಾಗಿದೆ.   ನಿನ್ನೆ ನಡೆದ ಸಭೆಯಲ್ಲಿ ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ದಸರಾ ಮೆರವಣಿಗೆಗೆ ಗಜಪಡೆಯನ್ನು ಸಿದ್ದಗೊಳಿಸಲು ಮುಂದಾಗಿದ್ದು , 16 ಆನೆಗಳ ಹೆಸರನ್ನು ಶಿಫಾರಸು ಮಾಡಲಾಗಿದೆ.

ಈ ಪೈಕಿ ಮೂರು ಆನೆಗಳು ಹೊಸದಾಗಿ ಸೇರ್ಪಡೆಯಾಗಿದ್ದು , ಜಂಬೂ ಪಡೆಯ ಕ್ಯಾಪ್ಟನ್ ಚಿನ್ನದ ಅಂಬಾರಿ ಹೊರುವ ಅರ್ಜುನ, ಬಲರಾಮ, ಗೋಪಾಲಸ್ವಾಮಿ, ಕಾವೇರಿ, ವಿಕ್ರಮ, ಗೋಪಿ, ಹರ್ಷ, ಪ್ರಶಾಂತ್, ಅಜಯ, ವಿಜಯ, ಗಜೇಂದ್ರ, ಸರಳ, ವರಲಕ್ಷ್ಮಿ , ಕೃಷ್ಣ , ದ್ರೋಣ, ಭೀಮ ಆನೆಗಳನ್ನು ದಸರಾ ಮಹೋತ್ಸವಕ್ಕೆ ಆಯ್ಕೆ ಮಾಡಲಾಗಿದೆ.  ಕೃಷ್ಣ , ದ್ರೋಣ, ಭೀಮ, ಹೊಸ ಸದಸ್ಯರಾಗಿದ್ದು , ಈ ಬಾರಿಯ ದಸರಾ ಮಹೋತ್ಸವದಲ್ಲಿ ಭಾಗವಹಿಸಲಿವೆ. ಸೆಪ್ಟೆಂಬರ್ 21ರಿಂದ 30ರವರೆಗೆ ದಸರಾ ಮಹೋತ್ಸವ ನಡೆಯಲಿದ್ದು, ಮೊದಲ ತಂಡದ ಗಜ ಪಡೆಯು ಆಗಸ್ಟ್ 10ಕ್ಕೆ ಮೈಸೂರಿಗೆ ಆಗಮಿಸಲಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin