ಜಂಬೂ ಸವಾರಿ ಮಾರ್ಗದಲ್ಲಿ ಹೆಲಿಕಾಪ್ಟರ್ ಹಾರಾಟ ಬೇಡ
ಈ ಸುದ್ದಿಯನ್ನು ಶೇರ್ ಮಾಡಿ
ಮೈಸೂರು, ಸೆ.25- ಜಂಬೂ ಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಹೆಲಿಕಾಪ್ಟರ್ ಹಾರಾಟ ಬೇಡ ಎಂದು ಡಿಸಿಎಫ್ ಏಡುಕೊಂಡಲು ಅವರು ಜಿಲ್ಲಾಡಳಿತ ಹಾಗೂ ವಿಮಾನ ನಿಲ್ದಾಣ ನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ದಸರಾ ವೇಳೆ ಹೆಲಿಕಾಪ್ಟರ್ ಜಾಲಿರೇಡ್ ಆರಂಭಿಸಲಾಗಿದ್ದು,ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಎರಡು ಹೆಲಿಕಾಪ್ಟರ್ ಹಾರಾಟ ನಡೆಸುತ್ತಿವೆ. ಅರಮನೆ ಮೇಲೆ ಹಾರಾಟ ನಡೆಸುವಾಗ ಹೆಲಿಕಾಪ್ಟರ್ ಶಬ್ದದಿಂದ ಅರಮನೆಯಲ್ಲಿರುವ ಆನೆಗಳು ಗಾಬರಿಯಾಗುತ್ತವೆ.
ಈ ಹಿನ್ನೆಲೆಯಲ್ಲಿ ಜಂಬೂ ಸವಾರಿ ಮೆರವಣಿಗೆ ನಡೆಯುವ ದಿನವಾದ ಸೆ.30ರಂದು ಬೆಳಗ್ಗೆಯಿಂದ ಸಂಜೆವರೆಗೆ ಅರಮನೆ ಹಾಗೂ ಜಂಬೂ ಸವಾರಿ ಬರುವ ಮಾರ್ಗದಲ್ಲಿ ಹೆಲಿಕಾಪ್ಟರ್ಗಳ ಹಾರಾಟಕ್ಕೆ ಅವಕಾಶ ನೀಡದಂತೆ ಪತ್ರ ಬರೆದಿದ್ದಾರೆ.
Facebook Comments