ಜಗತ್ತಿಗೆ ಸತ್ಯ ಸಾಯಿಬಾಬಾರ ಕೊಡುಗೆ ಅಪಾರ

ಈ ಸುದ್ದಿಯನ್ನು ಶೇರ್ ಮಾಡಿ

18

ಮೂಡಲಗಿ,ಫೆ.14- ಸಂಕಲ್ಪ, ಸೇವಾ ಮನೋಭಾವನೆ ಮೂಲಕ ಜಗತ್ತಿಗೆ ಸತ್ಯ ಸಾಯಿಬಾಬಾರ ಕೊಡುಗೆ ಅಪಾರವಾಗಿದೆ ಎಂದು ತೋಂಡಿಕಟ್ಟಿ ಶ್ರೀ ಗಾಳೇಶ್ವರ ಮಠದ ಶ್ರೀ ಅಭಿನವ ವೆಂಕಟೇಶ್ವರ ಮಹಾರಾಜರು ಹೇಳಿದರು.ಇಲ್ಲಿಯ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ನಡೆದ ಶ್ರೀ ಸತ್ಯಸಾಯಿ ಸೇವಾ ಸಮಿತಿಯ 10ನೇ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ ಇಂದಿನ ಮಕ್ಕಳಿಗೆ ವೇದ, ಘೋಷ, ಮಂತ್ರ ಪಠಣ ಸಂಸ್ಕೃತಿ  ನೀಡುವುದು ಅವಶ್ಯವಿದೆ. ಮನುಷ್ಯ ತನ್ನಲ್ಲಿಯ ಅಹಂಕಾರ, ದುರಾಶೆ ಬಿಟ್ಟು ಭಗವಂತನಲ್ಲಿ ಧ್ಯಾನ, ಭಜನೆ ಮಾಡುವುದರಿಂದ ಸಾಕ್ಷಾತ್ಕಾರ ದೊರೆಯುತ್ತದೆ ಎಂದು ಹೇಳಿದರು. ಕಲ್ಲೋಳಿಯ ಸತ್ಯಸಾಯಿ ಸೇವಾ ಸಮಿತಿಯ ಲೋಹಿತ ಕಲಾಲ ಮಾತನಾಡಿ, ನಮ್ಮದು ಸಂಸ್ಕೃತಿ  ವೈಭವ ಸಾರುವ ಪುಣ್ಯ ದೇಶವಾಗಿದೆ ಸಂತರ ನಿಶ್ವಾರ್ಥ ಪ್ರೀತಿ ಪ್ರೇಮದಿಂದ ಭಗವಂತನ ಅವಾತರಗಳು ಈ ಭೂಮಿಯಲ್ಲಿಯೇ ಆಗುತ್ತಿದೆ ಎಂದರು. ಬೆಳಗಾವಿಯ ಶ್ರೀ ಸತ್ಯಸಾಯಿ ಸೇವಾ ಸಮಿತಿ ಜಿಲ್ಲಾ ಅಧ್ಯಕ್ಷ ವಸಂತ ಬಾಳಿಗಾ ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಎಸ್. ಆರ್. ಸೋನವಾಲ್ಕರ, ಸುರೇಶ ಕಬ್ಬೂರ, ಎಚ್.ಎ. ಸೋನವಾಲ್ಕರ, ಡಿ.ಎಮ್. ಗಾಡವಿ, ಕೆ.ಬಿ. ನಾವಳ್ಳಿ, ಬಿ.ಎಮ್. ನಂದಿ, ಸಿ.ಎಮ್. ಹಂಜಿ, ಹಣಮಂತ ಸೊರಗಾಂವಿ, ರವಿ ನಂದಗಾಂವಿ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin