ಜಗತ್ತು ಭಯೋತಾದನೆಯಿಂದ ನಲುಗುತ್ತಿದೆ : ಪೋಪ್ ಫ್ರಾನ್ಸಿಸ್ ತೀವ್ರ ಕಳವಳ

ಈ ಸುದ್ದಿಯನ್ನು ಶೇರ್ ಮಾಡಿ

Pope-Francis

ವ್ಯಾಟಿಕನ್ ಸಿಟಿ, ಏ.11-ಈಜಿಪ್ಟ್‍ನ ಎರಡು ಚರ್ಚ್‍ಗಳಲ್ಲಿ ನಡೆದ ಭಯೋತ್ಪಾದಕರ ದಾಳಿಗಳಲ್ಲಿ 45ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿರುವ ಕೃತ್ಯದ ಬಗ್ಗೆ ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.  ವ್ಯಾಟಿಕನ್ ಸಿಟಿಯಲ್ಲಿ ನಡೆದ ಪಾಮ್ ಸಂಡೇ ಸಂದರ್ಭದಲ್ಲಿ ಪಾರ್ಥನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ದಾಳಿಗಳನ್ನು ಖಂಡಿಸಿದರು.   ಜಗತ್ತು ಯುದ್ಧಗಳು, ಭಯೋತ್ಪಾದನೆ ಹಾಗೂ ಶಸ್ತ್ರಸಜ್ಜಿತ ಮತ್ತು ದಾಳಿಗೆ ಸಿದ್ದವಾಗಿರುವ ಹಿತಾಸಕ್ತಿಗಳಿಂದ ಬಳಲುತ್ತಿದೆ ಎಂದು ಪೋಪ್ ಆತಂಕ ವ್ಯಕವ್ಯಕ್ತಪಡಿಸಿದರು.

ಮೃತಪಟ್ಟವರು ಮತ್ತು ಸಂತ್ರಸ್ತರಿಗಾಗಿ ನಾನು ಪ್ರಾರ್ಥಿಸುತ್ತೇನೆ. ಭಯೋತ್ಪಾದನೆ, ಹಿಂಸೆ ಮತ್ತು ಸಾವನ್ನು ಉಂಟು ಮಾಡುವ ಜನರ ಹಾಗೂ ಶಸ್ತ್ರಾಸ್ತ್ರಗಳನ್ನು ನಿರ್ಮಿಸಿ ಸಾಗಿಸುವ ಮಂದಿಯ ಹೃದಯಗಳನ್ನು ಪರಿವರ್ತನೆ ಮಾಡುವಂತೆ ನಾನು ಭಗವಂತನಲ್ಲಿ ಕೋರುತ್ತೇನೆ ಎಂದು ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin