ಜಗಳ ಬಿಡಿಸಲು ಬಂದವನನ್ನೇ ಇರಿದು ಪರಾರಿಯಾದರು

ಈ ಸುದ್ದಿಯನ್ನು ಶೇರ್ ಮಾಡಿ

Murder--01

ಬೆಂಗಳೂರು, ಡಿ.6- ಕ್ಷುಲ್ಲಕ ವಿಚಾರಕ್ಕೆ ಮಗನೊಂದಿಗೆ ಜಗಳವಾಡುತ್ತಿದ್ದವರನ್ನು ಸಮಾಧಾನಪಡಿಸಲು ಮುಂದಾದ ತಂದೆಗೆ ಚಾಕುವಿನಿಂದ ಹೊಟ್ಟೆಗೆ ಇರಿದು ಆರೋಪಿಗಳು ಪರಾರಿಯಾಗಿರುವ ಘಟನೆ ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಮಾವಳ್ಳಿಯ ಪಾಪಯ್ಯ ಸ್ಟ್ರೀಟ್, ಮಾರಮ್ಮ ದೇವಸ್ಥಾನ ಸಮೀಪದ ನಿವಾಸಿ ಮುರುಗನ್ (49) ಇರಿತದಿಂದ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುರುಗನ್ ಅವರ ಮಗ ಶಬರಿ (23) ಎಂಬಾತ ನಿನ್ನೆ ರಾತ್ರಿ 9.45ರಲ್ಲಿ ತನ್ನ ಬುಲೆಟ್ ವಾಹನದಲ್ಲಿ ಮನೆಗೆ ಬರುತ್ತಿದ್ದಾಗ ಮನೆ ಸಮೀಪವೇ ಬಿಳಿ ಹೋಂಡಾ ಆ್ಯಕ್ಟೀವ್‍ನಲ್ಲಿ ಬಂದ ಮೂವರು ಬೈಕ್ ಹಿಂದೆ ಸರಿಸುವ ವಿಚಾರವಾಗಿ ಈತನೊಂದಿಗೆ ಜಗಳವಾಡಿದ್ದಾರೆ. ಇದನ್ನು ಗಮನಿಸಿದ ಶಬರಿ ತಂದೆ ಮುರುಗನ್ ಸ್ಥಳಕ್ಕೆ ಬಂದು ಜಗಳ ಬಿಡಿಸಲು ಮುಂದಾದಾಗ ಆರೋಪಿಗಳು ಇವರ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ಇರಿತದಿಂದ ಗಾಯಗೊಂಡ ಮುರುಗನ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಕುವಿನಿಂದ ಇರಿದು ಪರಾರಿಯಾಗಿರುವ ಆರೋಪಿಗಳು ಹಾಗೂ ವಾಹನದ ಪತ್ತೆಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಕಲಾಸಿಪಾಳ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin