ಜಗ್ಗೇಶ್ ಚಲನಚಿತ್ರ ಮತ್ತು ರಿಯಾಲಿಟಿ ಶೋ ಪ್ರಸಾರ ಮಾಡದಂತೆ ಆಯೋಗಕ್ಕೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

jaggesh-somashekar

ಬೆಂಗಳೂರು, ಏ.28-ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಜಗ್ಗೇಶ್ ಅವರ ಚಲನಚಿತ್ರ ಮತ್ತು ದೂರದರ್ಶನದ ಕಾರ್ಯಕ್ರಮಗಳ ಪ್ರಸಾರ ವನ್ನು ನಿರ್ಬಂಧಿಸಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜಗ್ಗೇಶ್ ಅವರು ಚಿತ್ರನಟರಾಗಿದ್ದು, ಅವರ ಚಲನಚಿತ್ರಗಳು ಹಾಗೂ ಅವರು ನಡೆಸಿಕೊಡುವ ರಿಯಾಲಿಟಿ ಶೋಗಳು, ದೂರದರ್ಶನ, ಖಾಸಗಿ ವಾಹಿನಿ, ಸ್ಥಳೀಯ ಕೇಬಲ್ ನೆಟ್‍ವರ್ಕ್‍ಗಳು ಮತ್ತು ಇತರೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಇವು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿವೆ. ಇವುಗಳನ್ನು ನಿರ್ಬಂಧಿಸಬೇಕಾಗಿ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಇವರು ನಟಿಸಿರುವ ಚಲನಚಿತ್ರಗಳು, ನಡೆಸಿಕೊಡುವ ರಿಯಾಲಿಟಿ ಶೋಗಳು ಇತರೆ ಮಾಧ್ಯಮಗಳಲ್ಲಿ ಪ್ರಸಾರವಾಗುವುದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಚುನಾವಣಾ ಅವಧಿಯಲ್ಲಿ ಮತದಾರರ ಮೇಲೆ ಇವರ ಪರವಾಗಿ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.  ಆ ಕಾರಣ ಇವರು ನಟಿಸಿರುವ ಚಲನಚಿತ್ರಗಳನ್ನು ಹಾಗೂ ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಬೇಕಾಗಿ ಕೋರಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin