ಜಡೇಜಾ-ಅಶ್ವಿನ್‍ರ ಸ್ಪಿನ್ ಸುಳಿಗೆ ಸಿಕ್ಕಿ 262 ರನ್‍ಗಳಿಗೆ ಸರ್ವಪತನ ಕಂಡ ಕಿವೀಸ್

ಈ ಸುದ್ದಿಯನ್ನು ಶೇರ್ ಮಾಡಿ

aadASFSF

ಕಾನ್ಪುರ, ಸೆ. 24- ರವಿಂದ್ರ ಜಡೇಜಾ (5 ವಿಕೆಟ್) ಹಾಗೂ ರವಿಚಂದ್ರನ್ ಅಶ್ವಿನ್ (4 ವಿಕೆಟ್) ಸ್ಪಿನ್ ಸುಳಿಗೆ ಸಿಲುಕಿರುವ ನ್ಯೂಜಿಲೆಂಡ್ 262 ರನ್‍ಗಳಿಗೆ ಸರ್ವಪತನ ಕಾಣುವ ಮೂಲಕ 56 ರನ್‍ಗಳ ಇನ್ನಿಂಗ್ಸ್ ಹಿನ್ನೆಡೆ ಅನುಭವಿಸಿದೆ. ನಿನ್ನೆ ಬ್ಯಾಟಿಂಗ್ ವೈಭವ ಮೆರೆದಿದ್ದ ಕಿವೀಸ್‍ನ ರನ್ ದಾಹಕ್ಕೆ ಮಳೆ ಬ್ರೇಕ್ ಹಾಕಿತ್ತು. ಇಂದು ಪಂದ್ಯದ ಮೂರನೇ ದಿನದ ಆರಂಭದಲ್ಲೇ ಸ್ಪಿನ್ನರ್‍ಗಳು ವಿಲಿಯಮ್ಸ್‍ನ ಬಳಗದ ರನ್ ಹೊಳೆಗೆ ಸಮರ್ಥವಾಗಿ ಕಡಿವಾಣ ಹಾಕಿದರು.

124 ರನ್‍ಗಳಿಗೆ ಬ್ರೇಕ್:
ಭಾರತದ ಸ್ಪಿನ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಆರಂಭಿಕ ಆಟಗಾರ ಲ್ಯಾಥಮ್ ಹಾಗೂ ನಾಯಕ ಕೇನ್ ವಿಲಿಯಮ್ಸ್‍ರವರು ಎರಡನೇ ವಿಕೆಟ್‍ಗೆ 124 ರನ್‍ಗಳ ಜೊತೆಯಾಟ ನೀಡಿ ಆಕ್ರಮಣಕಾರಿಯಾಗಿ ಪರಿಣಮಿಸಿ ದ್ದರು.ಇಂದು ಕೂಡ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದ ಈ ಜೋಡಿಯನ್ನು 51.5 ಓವರ್ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್ ಗತಿಯನ್ನು ಅರಿಯದ ಲ್ಯಾಥಮ್ (58) ವಿಕೆಟ್ ಒಪ್ಪಿಸಿದರು.  ನಂತರ ಬಂದ ಅನುಭವಿ ಆಟಗಾರ ರಾಸ್ ಟೇಲರ್‍ರನ್ನು ಜಡೇಜಾ ಎಲ್‍ಬಿಡಬ್ಲ್ಯು ಬಲೆಗೆ ಬೀಳಿಸಿಕೊಂಡರು.

ಶತಕ ವಂಚಿತ ವಿಲಿಯಮ್ಸ್:
ಒಂದೆಡೆ ವಿಕೆಟ್‍ಗಳು ಉರುಳುತ್ತಿದ್ದರೂ ಕೂಡ ಶತಕದತ್ತ ಮುನ್ನುಗ್ಗುತ್ತಿದ್ದ ನಾಯಕ ಕೇನ್ ವಿಲಿಯಮ್ಸ್ (75ರನ್, 7 ಬೌಂಡರಿ) ರವಿಚಂದ್ರನ್ ಅಶ್ವಿನ್ ಎಸೆತ ಚೆಂಡನ್ನು ಬೌಂಡರಿಗಟ್ಟುವ ತವಕದಲ್ಲಿ ಕ್ಲೀನ್ ಬೌಲ್ಡಾಗುವ ಮೂಲಕ ಶತಕ ವಂಚಿತರಾದರು. ಭೋಜನ ವಿರಾಮದ ವೇಳೆಗೆ ನ್ಯೂಜಿಲೆಂಡ್ ಪ್ರಮುಖ 5 ವಿಕೆಟ್ ಗಳನ್ನು ಕಳೆದುಕೊಂಡು 238 ರನ್‍ಗಳಿಸಿತ್ತು. ಭೋಜನ ವಿರಾಮದ ನಂತರವು ನ್ಯೂಜಿಲೆಂಡ್‍ನ ಬ್ಯಾಟ್ಸ್‍ಮನ್‍ಗಳು ಭಾರತದ ಸ್ಪಿನ್ ಜೋಡಿಯನ್ನು ಸಾಮಥ್ರ್ಯವಾಗಿ ಎದುರಿಸಲು ಸಾಧ್ಯವಾಗದೆ 7 ರನ್ ಗಳಿಸುವಷ್ಟರಲ್ಲಿ ಅಂತಿಮ 5 ವಿಕೆಟ್‍ಗಳನ್ನು ಕಳೆದುಕೊಂಡು 262 ರನ್‍ಗಳಿಗೆ ಸರ್ವ ಪತನ ಕಂಡಿದೆ.

ಎಚ್ಚರಿಕೆಯ ಹೆಜ್ಜೆ:
58 ರನ್‍ಗಳ ಮೊದಲ ಇನ್ನಿಂಗ್ಸ್‍ನ ಮುನ್ನಡೆಯಿಂದ ಬ್ಯಾಟಿಂಗ್ ಆರಂಭಿಸಿದ ಭಾರತದ ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ ಹಾಗೂ ಮುರಳಿ ವಿಜಯ್ ಅವರು ಎಚ್ಚರಿಕೆಯ ಆಟಕ್ಕೆ ಮುಂದಾಗಿದ್ದಾರೆ. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಭಾರತ ವಿಕೆಟ್ ನಷ್ಟ ವಿಲ್ಲದೆ 23 ರನ್ ಗಳಿಸಿತ್ತು.

Facebook Comments

Sri Raghav

Admin