ಜನತೆಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

DKShiva

ಬೆಂಗಳೂರು, ಆ.17-ರಾಜ್ಯದಲ್ಲಿ ವಿದ್ಯುತ್ ಪರಿಸ್ಥಿತಿ ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಎಷ್ಟೇ ಕಷ್ಟವಾದರೂ ಜನರಿಗೆ ವಿದ್ಯುತ್ ಒದಗಿಸಲು ಬದ್ಧರಾಗಿರುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದರು.  ಮಳೆ ಕೊರತೆಯಿಂದಾಗಿ ವಿದ್ಯುತ್ ನಿಗಮಗಳು ಎರಡೂವರೆ ಸಾವಿರ ಕೋಟಿ ರೂ. ನಷ್ಟ ಹೊಂದಿವೆ. ಜಲವಿದ್ಯುತ್ ಉತ್ಪಾದನೆ ಶೇ.40ರಷ್ಟು ಮಾತ್ರ ಆಗುತ್ತಿದೆ. ಶೇ.60ರಷ್ಟು ಜಲವಿದ್ಯುತ್ ಉತ್ಪಾದನೆಯಲ್ಲೂ ನಷ್ಟವಾಗಿದೆ ಎಂದರು.  ಇದೇ ಪರಿಸ್ಥಿತಿ ಮುಂದುವರೆದು ಮಳೆ ಅಭಾವ ಉಂಟಾದರೆ ವಿದ್ಯುತ್ ಖರೀದಿ ಮಾಡಿ ಗ್ರಾಹಕರು ಮತ್ತು ರೈತರಿಗೆ ಯಾವುದೇ ರೀತಿ ಸಮಸ್ಯೆ ಉಂಟಾಗದಂತೆ ಪೂರೈಸಲಾಗುವುದು. ಮಧ್ಯಮ ಅವಧಿಯಲ್ಲಿ ವಿದ್ಯುತ್ ಖರೀದಿಸಲು ಟೆಂಡರ್ ಕರೆಯಲಾಗಿದ್ದು, ಪ್ರತಿ ಯೂನಿಟ್ಗೆ 4.36 ರೂ. ನಂತೆ ವಿದ್ಯುತ್ ಖರೀದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ ಎಂದರು.

ಮುಂದೆ ಎದುರಾಗಲಿರುವ ವಿದ್ಯುತ್ ಸಮಸ್ಯೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೂಡಂಕುಲಂನಿಂದ 209 ಮೆಗಾ ಯೂನಿಟ್ ವಿದ್ಯುತ್ ದೊರೆಯುತ್ತಿದ್ದು, ಯರಮರಸ್ನಿಂದಲೂ ವಿದ್ಯುತ್ ದೊರೆಯಲಿದೆ. ಕೋಲಾರ ವಿದ್ಯುತ್ ಉತ್ಪಾದನೆ ಪ್ರಾರಂಭವಾಗಲು ಇನ್ನೂ ಒಂದು ವರ್ಷ ಬೇಕಾಗಬಹುದು. ಈಗ ರೈತರಿಗೆ ಒದಗಿಸುತ್ತಿರುವ ತ್ರೀಫೇಸ್ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin