ಜನಪದ ಕಲೆ : ಇದುವರೆಗೂ ಸಮೀಕ್ಷೆ ನಡೆಸಲಾಗಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

5

ಬೆಳಗಾವಿ,ಸೆ.29- ಈಗಾಗಲೇ ಬುಡುಗಟ್ಟು ಸಮುದಾಯಗಳು ಸೇರಿದಂತೆ ಹಲವು ಕಲೆಗಳ ಬಗ್ಗೆ ಸರಕಾರ ಗಣತಿ ನಡೆಸಿದೆ. ಆದರೆ ಜನಪದ ಕಲೆಯ ಬಗ್ಗೆ ಇದುವರೆಗೂ ಸಮೀಕ್ಷೆ ನಡೆಸಲಾಗಿಲ್ಲ. ಕನ್ನಡ ಜನಪದ ಪರಿಷತ್ ಈ ಕುರಿತು ಗಮನ ಹರಿಸಿ ಈಗಾಗಲೇ 15 ಜಿಲ್ಲೆಗಳಲ್ಲಿ ಜನಪದ ಕಲೆ ಮತ್ತು ಕಲಾವಿದರ ಬಗ್ಗೆ ಸಮೀಕ್ಷೆ ನಡೆಸಿದೆ ಎಂದು ಕನ್ನಡ ಜಾನಪದ  ಪರಿಷತ್‍ನ ರಾಜ್ಯಾಧ್ಯಕ್ಷ  ಡಾ. ಎಸ್. ಬಾಲಾಜಿ ಹೇಳಿದರು. ಅವರು ನಿನ್ನೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಜಾನಪದ  ಪರಿಷತ್ ಘಟಕ ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಜನಪದಕ್ಕೆ ಸಂಬಂಧಿಸಿದಂತೆ ಕೆಲ ಪರಿಷತ್‍ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಕನ್ನಡ ಜಾನಪದ  ಪರಿಷತ್ ಗ್ರಾಮೀಣ ಮಟ್ಟದಿಂದ ಜನಪದ ಕಲೆ ಮತ್ತು ಕಲಾವಿದರ ಕುರಿತು ವಿಶೇಷ ಗಮನ ಹರಿಸಿ ಕಾರ್ಯತತ್ಪರವಾಗಿದೆ ಎಂದರು. ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪರಿಷತ್ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬರುವ 2017ರ ಜನೇವರಿ ಇಲ್ಲವೆ ಪ್ರೆಬುವರಿ ತಿಂಗಳಲ್ಲಿ ನಗರದಲ್ಲಿ ಲಾವಣಿ ಉತ್ಸವ ಆಯೋಜಿಸಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಜನಪದ ಕಲೆಗಳ ತಿಳುವಳಿಕೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ಕನ್ನಡ ಜನಪದ ಪರಿಷತ್‍ನ ಜಿಲ್ಲಾಧ್ಯಕ್ಷ ಮೋಹನ ಗುಂಡ್ಲೂರು ಅಧ್ಯಕ್ಷತೆ ವಹಿಸಿದ್ದರು. ಜಾನಪದ  ವಿದ್ವಾಂಸ ಪ್ರೊ . ಜ್ಯೋತಿ ಹೊಸುರ ಶುಭ ನುಡಿಯುತ್ತ, ಜನಪದ ಎಂದರೆ ನಮ್ಮ ಅಪ್ಪಟ್ಟ ಹಳ್ಳಿಗಳಲ್ಲಿ ಸಿಗುವ ಸಂಸ್ಕೃತಿ ಯಾಗಿದೆ.ಹಳ್ಳಿಗರ ವೇಷ ಭೂಷಣ, ಊಟೋಪಹಾರ, ನಡೆನುಡಿಗಳೆಲ್ಲ ಜನಪದವಾಗಿವೆ. ತಾವೊಬ್ಬ ಜನಪದ ವಿದ್ವಾಂಸ ಎನ್ನುವುದಕ್ಕೆ ಸಂಶಯಗಳು ಮನೆಮಾಡಿಕೊಂಡಿವೆ. ಅಂದರೆ ಅದರ ಅಧ್ಯಯನದಲ್ಲಿ ನಿರತನಾಗಿದ್ದೇನೆ. ನಮ್ಮ ಜನಪದ ಸಂಸ್ಕೃತಿ  ಕಲೆ ಇವೆಲ್ಲ ಉಳಿದು ಬೆಳೆಯಬೇಕು. ಪರಿಷತ್ ಈ ನಿಟ್ಟಿನಲ್ಲಿ ಕಾರ್ಯತತ್ಪರ ವಾಗಬೇಕೆಂದರು.
ಜಗತ್ತಿನಲ್ಲಿ ವಿದ್ವಾಂಸರು ಸಾಕಷ್ಟು ಜನರಿದ್ದಾರೆ. ಆದರೆ ಜಾನಪದ  ವಿಷಯದಲ್ಲಿ ವಿದ್ವಾಸಂರನ್ನು ಹುಡುಕಬೇಕಿದೆ. ಈ ಕ್ಷೇತ್ರದಲ್ಲಿ ವಿದ್ವಾಂಸರ ಕೊರತೆಯಿದ್ದು, ಅದರಂತೆಜಾನಪದ , ಕಲೆ, ಕಲಾವಿದರನ್ನು ಪರಿಗಣಿಸಿದರೇ 100ರಲ್ಲಿ ಶೇ.5 ರಿಂದ 10 ಪ್ರತಿಶತಕ್ಕೆ ಸೀಮಿತವಾಗಿದೆ ಎಂದು ಹೊಸುರು ವಿಷಾದ ವ್ಯಕ್ತ ಪಡಿಸಿದರು.ಮುಖ್ಯಅತಿಥಿಗಳಾಗಿ ಮಾಜಿ ಮಹಾಪೌರ ಸಿದ್ದನಗೌಡ ಪಾಟೀಲ, ಪ್ರೊ ರ. ಕೆ.ಎಸ್. ಕೌಜಲಗಿ, ಎಲ್.ಎಸ್. ಶಾಸ್ತ್ರಿ, ಬಾಳಮಗೌಡ ಪಾಟೀಲ, ಆಗಮಿಸಿದ್ದರು.ಸಮಾರಂಭದಲ್ಲಿ ಜಾನಪದ  ಕಲಾವಿದರಾದ ಲಲಿಯಾ ಪಾತ್ರೋಟ, ಸಕ್ರೆವ್ವ ಪಾತ್ರೋಟ, ಶಂಕ್ರೆವ್ವ ಮುಗಳಿ, ನಾಗಪ್ಪ ಮಾಡಮ್ಮಗೇರಿ, ಶ್ರೀಶೈಲ ಸತ್ತಿಗೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಆಶಾ ಯಮಕನಮರಡಿ, ರಾವಸಾಹೇಬ ಪಾಟೀಲ, ಡಾ. ಎಚ್.ಐ. ತಿಮ್ಮಾಪುರ, ಬಸವರಾಜ ಕುಪ್ಪಸಗೌಡರ, ಸಚೀನ ಪಾಟೀಲ, ಗುರುಗೌಡ ಪಾಟೀಲ, ಬಸವರಾಜ ಕೊಪ್ಪದ, ಚಂದ್ರಶೇಖರ ಕೊಪ್ಪದ, ಮೋಹನ ಬಸನಗೌಡ ಪಾಟೀಲ, ಎಸ್.ಆರ್. ಡೊಂಗ್ರೆ, ಲಕ್ಷ್ಮೀ ಅರಿಬೆಂಚಿ, ಶಂಕರ ಗುಡಗನಟ್ಟಿ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin