ಜನಪ್ರತಿನಿಧಿಗಳಿಗೆ ಸರ್ಕಾರ ಸಂಬಳ ಸಾಕಾಗುತ್ತಿಲ್ಲವಂತೆ..!

ಈ ಸುದ್ದಿಯನ್ನು ಶೇರ್ ಮಾಡಿ

payment

ಬೆಂಗಳೂರು, ಆ.12- ಅಧಿವೇಶನದ ವೇಳೆ ಸದನದಲ್ಲಿ ಪಾಲ್ಗೊಳ್ಳಲು ಮೀನಾಮೇಷ ಎಣಿಸುವ ನಮ್ಮ ಜನಪ್ರತಿನಿಧಿಗಳಿಗೆ ಸರ್ಕಾರ ನೀಡುತ್ತಿರುವ ಸಂಬಳ ಸಾಕಾಗುತ್ತಿಲ್ಲವಂತೆ.
ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುವ ನಾಲ್ಕನೆ ರಾಜ್ಯವಾಗಿದೆ ಕರ್ನಾಟಕ. ಆದರೂ ಸರ್ಕಾರ ನೀಡುತ್ತಿರುವ ಸಂಬಳ ಮಾತ್ರ ಏನೇನೂ ಸಾಕಾಗುತ್ತಿಲ್ಲ. ಹೀಗಾಗಿ ವೇತನ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಮತ್ತು ಸ್ಪೀಕರ್‍ಗೆ ಶಾಸಕರು ಪತ್ರ ಬರೆದಿದ್ದಾರೆ. ಅರಸೀಕೆರೆಯ ಕೆ.ಎಂ.ಶಿವಲಿಂಗೇಗೌಡ, ಮೂಡಗೆರೆ ಬಿ.ಬಿ.ನಿಂಗಯ್ಯ ಹಾಗೂ ಸಕಲೇಶಪುರದ ಎಚ್.ಕೆ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ಪತ್ರ ಬರೆದು ವೇತನ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದಾರೆ.
2015ರಲ್ಲಿ ಕರ್ನಾಟಕ ಸಚಿವರು ಮತ್ತು ಶಾಸಕರ ವೇತನ (ತಿದ್ದುಪಡಿ)  ಪ್ರಕಾರ ಮುಖ್ಯಮಂತ್ರಿ, ಸ್ಪೀಕರ್, ವಿಧಾನ ಪರಿಷತ್ ಸಭಾಧ್ಯಕ್ಷರು, ಸಚಿವರು, ರಾಜ್ಯ ಸಚಿವರು ಹಾಗೂ ಶಾಸಕರ ವೇತನವನ್ನು ದುಪ್ಪಟ್ಟು ಮಾಡಲಾಗಿತ್ತು.

ಈ ಪ್ರಕಾರ, ಮುಖ್ಯಮಂತ್ರಿಯವರಿಗೆ ತಿಂಗಳ ವೇತನವಾಗಿ 50 ಸಾವಿರ, ಸಂಪುಟ ದರ್ಜೆ ಸಚಿವರಿಗೆ 40 ಸಾವಿರ, ರಾಜ್ಯ ಸಚಿವರಿಗೆ 30 ಸಾವಿರ ಹಾಗೂ ಶಾಸಕರಿಗೆ 25 ಸಾವಿರ ವೇತನ ನಿಗದಿ ಮಾಡಲಾಗಿದೆ.   ಇದರ ಜತೆಗೆ ಕ್ಷೇತ್ರ ಭತ್ಯೆ, ಪ್ರವಾಸ ಭತ್ಯೆ, ಹೊಟೇಲ್ ಭತ್ಯೆ, ದೂರವಾಣಿ ಭತ್ಯೆ ಸೇರಿದಂತೆ ಪ್ರತಿ ತಿಂಗಳು ಒಬ್ಬ ಶಾಸಕ 1,10,000 ವೇತನ ಪಡೆಯುತ್ತಾರೆ.
ಎಲ್ಲೆಲ್ಲಿ ಎಷ್ಟು ಸಂಬಳವಿದೆ..? ಅಂದಹಾಗೆ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುವ ನಾಲ್ಕನೆ ರಾಜ್ಯವಾಗಿದೆ.  ತೆಲಂಗಾಣ 2,20,000, ದೆಹಲಿ 2,10,000, ಆಂಧ್ರ ಪ್ರದೇಶ 1,25,000, ಕರ್ನಾಟಕ 1,10,000, ಹರಿಯಾಣ, ಛತ್ತೀಸ್‍ಗಢ, ಮಧ್ಯ ಪ್ರದೇಶ 1 ಲಕ್ಷ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್‍ಗೆ 90 ಸಾವಿರ ವೇತನ ನೀಡಲಾಗುತ್ತದೆ.
ಇದರ ಜತೆಗೆ ಶಾಸಕರು ಯಾವುದೇ ಸಮಿತಿಯ ಅಧ್ಯಕ್ಷರು ಇಲ್ಲವೆ ಸದಸ್ಯರಾದರೆ ಅವರಿಗೆ ವಿಶೇಷವಾದ ಭತ್ಯೆ ನೀಡಲಾಗುತ್ತದೆ. ಯಾವುದಾದರೂ ಜಿಲ್ಲಾ ಪ್ರದೇಶಗಳಿಗೆ ಹೊರ ಹೋದರೂ ಹೆಚ್ಚಿನ ನೀಡಲಾಗುತ್ತದೆ.
ಶಾಸಕರ ವೇತನ: 25 ಸಾವಿರ
ಆಪ್ತ ಸಹಾಯಕರ ವೇತನ: 10 ಸಾವಿರ
ದೂರವಾಣಿ ವೆಚ್ಚ: 20 ಸಾವಿರ
ಕ್ಷೇತ್ರ ಭತ್ಯೆ: 40 ಸಾವಿರ
ಕ್ಷೇತ್ರ ಪ್ರಯಾಣ ಭತ್ಯೆ: 40 ಸಾವಿರ
ಅಂಚೆ ವೆಚ್ಚ: 5 ಸಾವಿರ
ಒಟ್ಟು 1,40,000
———–
ಮುಖ್ಯಮಂತ್ರಿ ವೇತನ: 50 ಸಾವಿರ
ಸಂಪುಟ ದರ್ಜೆ ಸಚಿವರು: 40 ಸಾವಿರ
ರಾಜ್ಯ ಸಚಿವರು: 30 ಸಾವಿರ

Facebook Comments

Sri Raghav

Admin