ಜನಮನಸೊರೆಗೊಂಡ ವೀರಾಭಿಮನ್ಯು ಮತ್ತು ಕುರುಕ್ಷೇತ್ರ ಪೌರಾಣಿಕ ನಾಟಕ

ಈ ಸುದ್ದಿಯನ್ನು ಶೇರ್ ಮಾಡಿ

gowribidanuru
ಗೌರಿಬಿದನೂರು,ಅ.10-
ಜಾಗತೀಕರಣ ಮತ್ತು ಆಧುನೀಕರಣದ ಹೆಸರಿನಲ್ಲಿ ಪ್ರಾಚೀನ ಕಲೆಗಳು ಮಾಯವಾಗುತ್ತಿದ್ದು, ರಂಗಭೂಮಿ ಕಲಾವಿದರ ಕಲೆಗಳು ಮೂಲೆಗುಂಪಾಗುತ್ತಿದ್ದು, ಇವುಗಳನ್ನು ಉಳಿಸಿ ಬೆ¼ಸುವ ಕೆಲಸಗಳಾಗ ಬೇಕು ಎಂದು ಮಾಜಿ ಶಾಸಕ ಎಸ್.ವಿ.ಅಶ್ವತ್ಥನಾರಾಯಣರೆಡ್ಡಿ ಹೇಳಿದರು.ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಶ್ಯಾಂಪುರ ಗ್ರಾ.ಪಂ. ವ್ಯಾಪ್ತಿಯ ಸಾದೇನಹಳ್ಳಿ ಗ್ರಾಮದ ಶ್ರೀ ಲಕ್ಷೀ ನರಸಿಂಹಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿಯ ಹಾಗೂ ಕನ್ನಡ ಮತ್ತು ಸಾಂಸ್ಕೃತಿ   ಇಲಾಖೆ ಸಹಯೋಗದೊಂದಿಗೆ ವೀರಾಭಿಮನ್ಯು ಮತ್ತು ಕುರುಕ್ಷೇತ್ರ ಕನ್ನಡ ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೌರಾಣಿಕ ನಾಟಕಗಳು ಜನರಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತುವ ಮೂಲಕ ಮಾನವ ಜನ್ಮದ ಒಳಿತು ಕೆಡುಕು ಸತ್ಯ, ಧರ್ಮ, ನೀತಿ ಮಾರ್ಗದಲ್ಲಿ ನಡೆಯಲು ಹಾಗೂ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಹೆಚ್ಚು ಸಹಕಾರಿಯಾಗುತ್ತವೆ ಎಂದು ಹೇಳಿದರುಪರಿಸರವಾದಿ ರೈತಮುಖಂಡ ಎಂ.ಆರ್.ಲಕ್ಷ್ಮೀನಾರಾಯಣ್ ಮಾತನಾಡಿ ಕಲೆ ಎಂಬುದು ಕಲಾವಿದನ ಸ್ವತ್ತು . ನಾಟಕ ಕಲೆಯ ಮೂಲಕ ಪೌರಾಣಿಕ ಕತೆಗಳನ್ನು ಜನಮಾನಸದಲ್ಲಿ ಸೇರಿವೆ. ರಂಗ ಭೂಮಿ ಪ್ರತಿಭೆಗಳಾಗಿ ಬೆಳೆದ ಕನ್ನಡದ ಡಾ.ರಾಜ್‍ಕುಮಾರ್ ಹಾಗೂ ತೆಲುಗಿನ ಎನ್.ಟಿ.ರಾಮಾರಾವ್ ಪಾತ್ರಗಳಿಗೆ ಜೀವತುಂಬಿ ಅಭಿನಯಿಸುವ ಮೂಲಕ ಕಲೆಯ ಶಕ್ತಿ ಅವರನ್ನು ಮೇರು ವ್ಯಕ್ತಿತ್ವಗಳನ್ನಾಗಿ ರೂಪಿಸಿತು ಎಂದು ಅವರು ವಿವರಿಸಿದರು. ರಂಗಮಂಟಪದಲ್ಲಿ ಬದುಕಿ- ಮನಸ್ಸಿಗೆ ಮಾದರಿ ಉದಾಹರಣೆ ನೀಡುತ್ತದೆ ಎಂದರು.
ಜಿಪಂ. ಸದಸ್ಯ ಪಿ.ಎನ್.ಪ್ರಕಾಶ್ ಮಾತನಾಡಿ ನಾಡು-ನುಡಿ ಭಾಷೆ ಕಲೆ ಸಂಸ್ಕೃತಿ ಉಳಿಸಿ ಬೆಳೆಸಲು ಅಭಿವೃದ್ದಿ ಪಡಿಸಲು ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಪ್ರತಿಭಾವಂತ ಕಲಾವಿದರು ಅಗತ್ಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಗ್ರಾಮೀಣ ಭಾಗದಲ್ಲೆ ಮೂಲ ಕಲೆಯ ಬೇರು ಇದ್ದು ನಾಟಕದ ಸೋಗಡನ್ನು ಪೋಷಿಸಿ ಬೆಳೆಸಿ ಎಂದರು. ಸಮಾರಂಭದಲ್ಲಿ ತಾಪಂ ಸದಸ್ಯ ಸುಖನ್ಯಾ ಆರ್.ವೆಂಕಟೇಶ್, ಕೋಚಿಮುಲ್ ಮಾಜಿ ನಿರ್ದೇಶಕ ಎಸ್.ವಿ.ಸುಬ್ಬಾರೆಡ್ಡಿ, ಮಾಜಿ ತಾಪಂ ಸದಸ್ಯ ಎಂ.ನಾರಾಯಣಸ್ವಾಮಿ, ಶ್ಯಾಂಪುರ ಗ್ರಾ ಪಂ ಅಧ್ಯಕ್ಷ ಸುದರ್ಶನ್ ರೆಡ್ಡಿ, ಹಾರ್ಮೋನಿಯಂ ಮತ್ತು ನಿರ್ದೇಶಕ ಎ.ಪಿ.ಮಹದೇವಾಚಾರ್, ಪ್ಲಾಟ್ ಮಾಸ್ಟ್‍ರ್ ಆರ್.ಶ್ರೀಧರ್, ನಾಟಕ ವ್ಯವಸ್ಥಾಪಕ ಎಸ್.ವಿ.ಈಶ್ವರಯ್ಯ, ಮುನಿರಮರೆಡ್ಡಿ ಹಾಗೂ ಗ್ರಾ ಪಂ ಸದಸ್ಯರು, ವಿವಿಧ ತಾಲೂಕು ಹಾಗೂ ಹೋಬಳಿಯ ಸುತ್ತ-ಮುತ್ತಲ ಗ್ರಾಮಸ್ಥರು ಮತ್ತು ಕಲಾಸಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು .

 

 

► Follow us on –  Facebook / Twitter  / Google+

 

 

Facebook Comments

Sri Raghav

Admin